ಪರಶಿವ
ಪರಶಿವ
ಮಳೆಯು ಕಾಣದೆ
ಕಳೆಯು ಕುಂದಿದೆ
ಬೆಳೆಯು ಬಾಡಿದೆ ಪರಶಿವ
ಇಳೆಯು ನೊಂದಿದೆ
ಹೊಳೆಯು ಹರಿಸುತ
ಬೆಳೆಯು ಬೆಳೆಯಲಿ ಪರಶಿವ
ಧರೆಗೆ ಚೆಲುವಿನ
ಮೆರಗು ನೀಡಲು
ಶಿರದ ಗಂಗೆಯ ಕಳುಹಿಸು
ಬರಡು ಭೂಮಿಗೆ
ಸುರಿಸಿ ಹನಿಯನು
ಕೆರೆಯು ತುಂಬಲಿ ಹರ್ಷದಿ
ಹರನೆ ಬೇಡುವೆ
ಶಿರವ ಬಾಗುವೆ
ಮರೆಸು ಜನರ ವೇದನೆ
ಉರಿವ ಬಿಸಿಲನು
ಬಿರಿದ ನೆಲವನು
ಸರಿಸು ಬಾರೋ ಶಂಕರ
