STORYMIRROR

AMMU RATHAN SHETY

Classics Inspirational Others

4  

AMMU RATHAN SHETY

Classics Inspirational Others

ಪ್ರೀತಿ

ಪ್ರೀತಿ

1 min
217

ಆಗುಂಬೆಯ ತುಂತುರಿನಂತೆ

ನಿರಂತರ ಸಾಗುವ

ನನ್ನ ಕವಿತೆಯ ಸಾಲುಗಳು

ನಿನ್ನ ಮೌನಕ್ಕಿಂತ ಹಿತವಲ್ಲವೇ


ಯಾರಿಗೂ ತಿಳಿಸದೇ

ಮನಸೊಳಗೆ ಬಚ್ಚಿಟ್ಟ 

ನಿನ್ನ ಪ್ರೀತಿಗಿಂತಲೂ

ನನ್ನ ಮಾತುಗಳೇ ನಿಜವಲ್ಲವೇ


ಕ್ಷುಲ್ಲಕ ಕಾರಣ ಹೇಳಿ

ಇಲ್ಲಸಲ್ಲದ ಆರೋಪ ಮಾಡಿ

ಈ ಹೃದಯ ಘಾಸಿಗೊಳಿಸಿದರೂ

ಮರೆಯದ ಈ ಪ್ರೀತಿ ನಿಜವಲ್ಲವೇ


ಸಾವಿರ ಕನಸುಗಳ ಹೊತ್ತ

ಮನಸು ಸಂಚರಿಸುತ್ತಿತ್ತು ನಿನ್ನ ಸುತ್ತ.

ಮರುಕಳಿಸುವ ನೆನಪುಗಳು ಮಾತ್ರ

ನೀ ದೂರ ಮಾಡಿದ ಬದುಕಿನಲ್ಲೀಗ 


Rate this content
Log in

Similar kannada poem from Classics