STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಪ್ರೀತಿ

ಪ್ರೀತಿ

1 min
361

ಜೀವನದ ಸಾಗರದಿ

ಜನುಮ ತಳೆದಾಗ

ಮಾತೆಯ ರೂಪದಲ್ಲಿ

ಮಮತೆಯನುಣಿಸಿದೆ


ಯೌವನದ ಹೊಳೆಯಲ್ಲಿ

ಇನಿಯನಂದದಿ ಬಂದು

ಪ್ರೀತಿಯ ಹೆಸರಿನಲ್ಲಿ

ಕೈಹಿಡಿದು ನಡೆಸಿದೆ


ನೋವು-ನಲಿವಿನಲಿ

ಸಮಭಾಗಿ ನೀನಾಗಿ

ಗೆಳೆತನದ ಬಗೆಯ ಕದನಗಳು

ಒಲವ ರೂಪದೊಳಳಿದಿಹವು


ಇಳಿಹರಯದಲಿ ಮುನಿಸು

ತೆರೆಯ ರೂಪದಲಿ ಕಾಡಿದರೂ

ಮನದೊಳಗಿನ ಅಕ್ಕರೆಗೆ

ಸರಿಸಮನು ಯಾವುದು ?


ಒಲವು ಮಾತೆಯ ಮಮತೆಯಹುದು

ಒಲವು ಮಗುವಿನ ಪ್ರೀತಿಯಹುದು

ಒಲವು ಹೆಣ್ಣಿನ ಪ್ರೇಮವಹುದು

ಒಲುಮೆ ಬಾಳಿಗೆ ಕೊಂಡಿಯಹುದು

ಒಲುಮೆಯೇ ಬಾಳಿನಬೆಳಕಹುದು



Rate this content
Log in

Similar kannada poem from Classics