STORYMIRROR

Ranjitha M

Classics Inspirational Others

4  

Ranjitha M

Classics Inspirational Others

ನಮ್ಮ ಹೆಮ್ಮೆಯ ರಾಜಧಾನಿ

ನಮ್ಮ ಹೆಮ್ಮೆಯ ರಾಜಧಾನಿ

1 min
354

ನಮ್ಮ‌ ಕರ್ನಾಟಕದ ರಾಜಧಾನಿ

ಅದುವೆ ಯಾವುದು ಗೊತ್ತಾ..?

ನಮ್ಮ ಬೆಂದಕಾಳೂರು ಹೌದು

ಅದುವೆ ನಮ್ಮ ಬೆಂಗಳೂರು


ಉದ್ಯಾನನಗರಿ ಎಂಬ ಹೆಸರಿದಕ್ಕಿದೆ

ಸಿಲಿಕಾನ್ ಸಿಟಿ ಎಂಬ ಹೆಸರಿದಕ್ಕಿದೆ

ಕರ್ನಾಟಕದ ವಿಧಾನ ಸೌಧವು ಇಲ್ಲಿದೆ

ಚಂದದ ಅರಮನೆಯು ಕೂಡ ಇಲ್ಲಿದೆ


ಲಾಲ್ ಬಾಗಿನ ಚಂದದ ನೋಟ 

ಕಬ್ಬನ್ ಪಾರ್ಕಿನ ಅಂದದ ನೋಟ

ಬನ್ನೇರುಗಟ್ಟ ನ್ಯಾಷನಲ್ ಪಾರ್ಕಿನ‌ ನೋಟ

ಸ್ನೋ ಸಿಟಿಯ ಕಂಡೆಲ್ಲ ಆನಂದ ಹೊಂದುವರು


ಇಸ್ಕಾನಿನ ಶ್ರೀ ಕೃಷ್ಣನ ದೇವಾಲಯ

ಹಲಸೂರಿನ ಸೋಮೇಶ್ವರ ದೇವಾಲಯ

ಗವಿ ಗಂಗಾಧರೇಶ್ವರನ ದೇವಾಲಯ 

ಹಲವು ದೇವಾಲಯಗಳನೊಳಗೊಂಡ ಪುಣ್ಯದೂರು


ಬನ್ನಿರೆಲ್ಲ ನಮ್ಮ ರಾಜಧಾನಿಗೆ

ಚಂದದ ಊರ ಕಾಣಿರೆಲ್ಲ 

ಸವಿಯಿರೆಲ್ಲ ಚಂದದ ಊರ ಸೊಬಗನು 

ಬೆಂಗಳೂರದು ನಮ್ಮ ಹೆಮ್ಮೆಯ ರಾಜಧಾನಿ



Rate this content
Log in

Similar kannada poem from Classics