STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ನಿಸ್ವಾರ್ಥ ಸೇವಕ

ನಿಸ್ವಾರ್ಥ ಸೇವಕ

1 min
263


ಜಾತಿ ಧರ್ಮ ನೋಡಲಿಲ್ಲ

ಬಡವ ಧನಿಕ ಎನ್ನಲಿಲ್ಲ 

ಬುದ್ಧಿಯನ್ನು ಅಳೆಯಲಿಲ್ಲ

ದಡ್ಡರೆಂದು ಅವಮಾನಿಸಲಿಲ್ಲ

ಯಾಕೆಂದರೆ ಶಿಕ್ಷಕರು ದಾರಿದೀಪ


ಹಣದ ದಾಹ ಇವರಿಗಿಲ್ಲ

ಸಂಬಳಕ್ಕಾಗಿ ದುಡಿದವರಲ್ಲ

ಸ್ವಾರ್ಥದ ಸೇವೆ ಮಾಡುವರಲ್ಲ

ಕಾಟಾಚಾರಕ್ಕೆ ಕಲಿಸಿದವರಲ್ಲ

ಯಾಕೆಂದರೆ ಶಿಕ್ಷಕರು ದಾರಿದೀಪ


ಸಹನೆಯ ಕಳೆದುಕೊಂಡವರಲ್ಲ

ಕ್ರೋಧಗೊಂಡೆಂದೂ ಬೈದವರಲ್ಲ

ದುರಂಕಾರದಲ್ಲಿ ವರ್ತಿಸಿದವರಲ್ಲ

ದ್ವೇಷವನ್ನೆಂದು ಸಾಧಿಸಿದವರಲ್ಲ

ಯಾಕೆಂದರೆ ಶಿಕ್ಷಕರು ದಾರಿದೀಪ


ನೂರು ನೋವು ತೋರ್ಪಡಿಸಲಿಲ್ಲ

ನಲಿವನು ಹಂಚಿ ಸಂಭ್ರಮಿಸಿಹರಲ್ಲ 

ಮಕ್ಕಳ ಕನಸಿಗೆ ರೆಕ್ಕೆಯ ಕಟ್ಟಿಹರಲ್ಲ

ಭರವಸೆಯಿಂದ ಗುರಿಯ ನೆಟ್ಟಿಹರಲ್ಲ

ಯಾಕೆಂದರೆ ಶಿಕ್ಷಕರು ದಾರಿದೀಪ


Rate this content
Log in

Similar kannada poem from Classics