ನಿಲುಕದ ನಕ್ಷತ್ರ
ನಿಲುಕದ ನಕ್ಷತ್ರ
ನನ್ನ ಮನದಲ್ಲಿ ಮಿಂಚುವ ನಿಲುಕದ ನಕ್ಷತ್ರ ನೀನು
ಕೈದೋರಿ ದಾರಿ ತೋರಿಸೋ
ದೃವತಾರೆ ನೀನು
ಮನಕೆ ಮುದ ನೀಡುತಿಹ ಧೂಮಕೇತುವು ನೀನು
ನನ್ನ ಮನದಿ ಮಿಂಚುವ ನಿಲುಕದ ನಕ್ಷತ್ರ ನೀನು
ವ್ಯೋಮ, ಆಪ, ವಾಯು,ತೇಜವು ನೀವು
ನನ್ನ ಉಸಿರಲ್ಲಿ ಬೆರೆತಿಹ ಜೀವಾಳ ನೀನು
ತಾಯಿ ನೀನು, ತಂದೆ ನೀನು
ಬಂಧು ನೀನು, ಬಳಗ ನೀನು
ನಭೋ ಮಂಡಲವು ನೀನು
ಸೃಷ್ಟಿ ಸ್ಥಿತಿ ಲಯಕರ್ತನೂ ನೀನು
ನನ್ನ ಮನದಲ್ಲಿ ಹೊಳೆ ಹೊಳೆ ಹೊಳೆಯುತಿಹ
ನಕ್ಷತ್ರ ನೀನು
ಭಕ್ತಿ ನೀನು, ಶಕ್ತಿ ನೀನು,
ನಾನೆಂಬ ಕಸ್ತೂರಿ ಮೃಗದ ಮನವೆಂಬ ನಾಭಿಯಲಿ
ಅವಿತು ಕುಳಿತಿಹ ಕಸ್ತೂರಿ ನೀನು....
ಸೌರಮಂಡಲವೇ ನೀನು,
ಗ್ರಹಗತಿಯೆ ನೀನು,
ನಾನೆಂಬ ನಾಸ್ತಿಕನ ಕೈಯಲ್ಲಿ
ಆಸ್ತಿಕತೆಯ ಕೀರ್ತನೆಯ ಬರೆಸುತಿಹ
ನನ್ನ ಮನದೊಳಗಿನ ತಾರೆ ನೀನು
ನನ್ನ ಮನದಲ್ಲಿ ಮಿಂಚುತಿಹ ನಿಲುಕದ ನಕ್ಷತ್ರ ನೀನು
