STORYMIRROR

charan kumar

Classics Inspirational Others

4  

charan kumar

Classics Inspirational Others

ನೀಲಿ ಆಗಸದಾಗೆ

ನೀಲಿ ಆಗಸದಾಗೆ

1 min
623

ನೀಲಿ ಆಗಸದಾಗ ಸಂತಸದಿ ತೇಲಿ ಹಾರುತಾವೂ ಬಾನ ಹಕ್ಕಿ

ಮೇಲೆ ಬಾನ ಪಟಪಟದೊಳಗ ಮಿರುಗುತಾವೋ ನನ್ನ ಚುಕ್ಕಿ

ಚಂದ್ರನೂ ಜೊತೆಗಿದ್ದು ಮಾಡುವನು ಕೂಡಿ ಕಳೆವ ತನ್ನ ಲೆಕ್ಕ

ತಿಳಿ ಮುಗಿಲ ಸಾಲದು ಸುಖದ ಸಂದೇಶ ತರುವುದೇನು ಪಕ್ಕ?

ಎತ್ತರದಿಂದೆತ್ತರಕ್ಕೆ ಏರುವ ಬಯಕೆಯು ಮೂಡಿದೆ ಈ ಮನಕೆ

ಮತ್ತೆ ಮತ್ತೆ ಗುರಿ ಸೇರಿದರೂ ನಿಲ್ಲುತ್ತಿಲ್ಲ ಹಿರಿದು ನನ್ನ ಬಯಕೆ

ರೆಕ್ಕೆ ಅಗಲಿಸಿ ಹಕ್ಕಿಯಂತೆಯೇ ಮೇಲೆ ಹಾರುವಾಸೆಯು ನನಗೆ

ಪುಕ್ಕವು ಸಿಗದೆ ಹಾರಿದ ಮೇಲೆ ಬಾನು ಸಿಗುದೇ ಮತ್ತೆ ಕೊನೆಗೆ

ಅಲೆ ಅಲೆ ಅಬ್ಬರಿಸುವ ಕಡಲನು ಈಗಲೇ ದಾಟುವೆನು ನಾನು

ಹಲಹಲವು ಹಂಬಲ ಸಾಗರದ ಅಲೆಗಳ ಸಹಿಸಲಾರೆಯೇನು?

ಉಸಿರು ಬಿಗಿದರೂ ಕನಸುಗಳು ಕೊನರಿದವು ಮೇಲೆ ಮೇಲೇ

ಹೆಸರು ಕೂಗಿದರೂ ಮತ್ತೆ ಮತ್ತೆ ಕೇಳುತ್ತಿಲ್ಲ ನೀ ನಿಲ್ಲು ನಿಲ್ಲಲೇ

ಆ ಆಕಾಶಕೊಮ್ಮೆ ಈ ಇಳೆಗೊಮ್ಮೆ ಏರಿಳಿಯುವುದು ಬದುಕು

ನಿನಗೇನೆ ಇರಲಿ ಕಷ್ಟಕೋಟಲೆಯು ಸುಖ ಅದರಲ್ಲೇ ಹುಡುಕು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics