STORYMIRROR

charan kumar

Classics Inspirational Others

4  

charan kumar

Classics Inspirational Others

ಅತ್ತಿಗೆ

ಅತ್ತಿಗೆ

1 min
685


ಅಣ್ಣನ ಕೂಡಿ ಬಂದಿಹ ಅತ್ತಿಗೆ ಪ್ರೀತಿ

ಸಣ್ಣದೇನಲ್ಲ ನಮಗದು ಸಣ್ಣದೇನಲ್ಲ

ಮಾತೆಯ ಸರಿಸಮ ಮಮತೆಯನೀವಳು

ಅತ್ತಿಗೆ ಈ ಪ್ರೀತಿಗೆ ಅಮ್ಮನೆ ಜೊತೆಯಿಲ್ಲಿ

ಅಕ್ಕರೆ ನೀಡುವ ಅಕ್ಕನು ಕಾಣುವಳಿಲ್ಲಿ

ಸಕ್ಕರೆ ಪ್ರಿತಿಗೆ ನಾ ಕೊನೆಯೇ ಕಂಡಿಲ್ಲ

ನೊಂದಿಹ ಮನಕೆ ನಗುನಗುತಲೆ ನಲಿವನು

ತಂದೀಯುವ ಸ್ನೇಹಿತೆಯು ಬೇರೆ ಯಾರಲ್ಲ

ತಪ್ಪನು ಮಾಡಲು ತಾ ದಂಡನೆ ನೀಡದೆ ತಪ್ಪನು

ಒಪ್ಪುವ ಹಾಗೆ ಮನಕೆ ಬುದ್ಧಿಯನೀವ ಗುರುವೀಕೆ

ಕರುಣೆಯ ಕಡಲು ಇದು ಮಮತೆಯ ಮಡಿಲು

ಬರುವಳು ಅತ್ತಿಗೆ ಅಣ್ಣನ ಜೊತೆ ನಗುನಗುತ

ಅಣ್ಣನ ಬದುಕಿನ ಶಕ್ತಿಯೇ ಆಗಿಹಳು ಅತ್ತಿಗೆ

ನಮ್ಮ ಮನೆಯನು ಬೆಳಗಲು ಬಂದಿಹ ಗೃಹಲಕ್ಷ್ಮಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics