STORYMIRROR

Surabhi Latha

Classics Inspirational Others

4  

Surabhi Latha

Classics Inspirational Others

ನಾವೆಲ್ಲಾ ಒಂದೇ

ನಾವೆಲ್ಲಾ ಒಂದೇ

1 min
365

ಒಂದೇ ಒಂದೇ ನಾವೆಲ್ಲಾ ಒಂದೇ

ಬನ್ನಿ ಬನ್ನಿ ಜೊತೆಯಾಗಿ ಸಾಗುವ ಮುಂದೆ


ಬೇರೆ ಬೇರೆ ಗುಂಪುಗಳಾಗಿ ಬೇಡ

ಮನದ ಕಿಚ್ಚು ನೀ ತೋರಬೇಡ

ಒಗ್ಗಟ್ಟಿನಲ್ಲಿ ಬಲವಿದೆ ನೀ ನೋಡ

ಒಟ್ಟಿಗೆ ಸಾಗುವ ಜೈ ಕಾರ ಹಾಡ


ಕಚ್ಚಾಡಲಿ ಪಕ್ಷ ಪಕ್ಷ ನಾಚಿಕೆ ಬಿಟ್ಟು

ಬಿಟ್ಟುಕೊಡೆವು ನಾವು ದುಷ್ಟರ ಜುಟ್ಟು

ಅಟ್ಟಹಾಸ ಮೆರೆವರ ಅಂತ್ಯ ವಾಗಲಿ

ಮೆಟ್ಟಿ ನಿಲ್ಲುವ ಗಂಡುತನ ಉಳಿಯಲಿ


ಮಾದರಿಯಾಗಲಿ ಮುಂದಿನ ಪೀಳಿಗೆಗೆ

ದುಡಿವ ನಾವು ಕನ್ನಡ ಏಳ್ಗೆಗೆ

ಕೈ ಕೂಡಿಸಿ ಒಂದೇ ಎಂದು ಸಾರುವ

ಬವಣೆಗಳಿಗೆ ಬಗ್ಗದೆ ನಕ್ಕು ನಡೆಯುವ


ಜೈ ಕರ್ನಾಟಕ ಮಾತೆಯೇ ನಮ್ಮನ್ನು ಹರಸಿ ಕಾಪಾಡು ಮಾತೆಯೇ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics