ನಾರಿ ಶಕ್ತಿ
ನಾರಿ ಶಕ್ತಿ
ಒಲಿದರೆ ನಾರಿ
ಮುನಿದರೆ ಮಾರಿ
ಅವಳಲ್ಲ ಹೆಮ್ಮಾರಿ
ಅವಳೇ ಸುಕುಮಾರಿ
ಅವಳೊಂದು ನೋಟ
ನೋಡುಗರಿಗದೇನೋ ಮಾಟ
ಅವಳೊಂದು ಕಿರುನಗೆ
ಮನದಲ್ಲಿ ಹಲವು ಬಗೆ
ಅವಳು ಕರುಣಾಮಯಿ
ಮಕ್ಕಳ ಮುದ್ದಿನ ಮಾಯಿ
ಅವಳು ಬಳುಕುವ ಬಳ್ಳಿ
ಹೇಳುವರು ಅವಳು ಮಳ್ಳಿ
ಅವಳು ಒಳ್ಳೆಯ ಗೆಳತಿ
ಸಲಹೆ ಕೊಡುವ ದೇವತೆ
ಅವಳು ಬಹಳ ಸುಂದರಿ
ನಗು ಬೀರುವ ಪುಷ್ಪಸಿರಿ
ಪ್ರೀತಿ ತೋರುವ ಮಾಯೆ
ವಾತ್ಸಲ್ಯದಿ ಮಿನುಗುವ ಛಾಯೆ!!
