ಮುಡಿಗೇರದ ಮಲ್ಲಿಗೆ
ಮುಡಿಗೇರದ ಮಲ್ಲಿಗೆ
ಬಾಡಿಹೋಗಿಹೆನೆಂದು ಮರುಗದಿರು ಮಲ್ಲಿಗೆಯೇ
ದುಗುಡದಲಿ ಮುಳುಗಿಹೆ ಎನ್ನ ಮನ ನಿನ್ನ ಸೊಗಸ ಕಾಣದೆ
ಅವಳ ತುರುಬಿನಲ್ಲಿ ನಿನ್ನ ಮೆರವಣಿಗೆ ಇಲ್ಲಾ
ತಲೆದಿಂಬ ಅಂಚಿನಲ್ಲಿ ನಿನ್ನ ಘಮ ಪಸರಿಸಿಲ್ಲಾ
ನಿನ್ನಿಂದ ಅಲಂಕೃತಗೊಂಡ ಪಲಂಗವಿಲ್ಲಾ
ಮುಡಿಗೇರಿಸಿ ನಡೆದು ಬೀಗುವ ಸೌಂದರ್ಯವಿಲ್ಲಾ
ನೆನ್ನೆ ಹುಟ್ಟಿ ಇಂದು ಬಾಡಿದೆ ನೀನು
ಸೌಂದರ್ಯದೊಳು ವಿರಹವ ಬೆಸೆದು
ಮರುಗದಿರು ಮಲ್ಲಿಗೆಯೇ ಮರುಗದಿರು ಮಲ್ಲಿಗೆಯೇ
ದೂರದಲ್ಲೊಂದು ಜೀವ ನಿನ್ನ ಕಾಯುತಿದೆ
ಪ್ರಣಯ ಗೀತೆಯೊಡನೆ ನಿನ್ನ ಪೋಣಿಸಲು

