STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಮಹಿಳೆ

ಮಹಿಳೆ

1 min
342

ಜೀವನದ ನಾಟಕದ

ಏಕ ಮಹಿಳೆ ಹಲವು ಪಾತ್ರಗಳಿಗೆ

ಜೀವವ ತುಂಬಿಹಳು 

ಮನಗೆದ್ದಿಹಳು ಜಗವೇ ಮೆಚ್ಚಿಹುದು

ಅಚ್ಚರಿಯ ಕೊಂಡಾಡುತಿಹುದು...

ಜೀವವೊಂದು ಜನಿಸಿ ಬಂದಾಗ

ಎತ್ತಿಕೊಳ್ಳಲು ಹಾತೊರೆಯುವಾಕೆ 

ಕರುಣಾಮಯಿ ಮಾತೆ

ಎಳೆತನದ ಮುಗ್ಧತೆಯಲ್ಲಿ ಬೆರೆತು

ಕಾಳಜಿ ವಹಿಸಿ ನಕ್ಕುನಲಿದವಳು 

ಅಕ್ಕರೆಯ ಸಹೋದರಿ

ಶಾಲೆಯ ಮಟ್ಟಲೇರಿದಾಗ 

ಕಲಿಕೆಗೆ ಆಸರೆಯಾಗಿ ನಿಂತು

ಬೆನ್ನುತಟ್ಟಿದಾಕೆ ಶಿಕ್ಷಕಿ

ಕುಗ್ಗಿಹೋದಾಗ ಜೊತೆಗೆ ನಿಂತವಳು 

ಸಾಂತ್ವನ ಹೇಳಿದವಳು 

ನಲ್ನುಡಿಯ ನಲ್ಮೆಯ ಗೆಳತಿ

ಬಾಳಸಂಗಾತಿಯಾಗಿ 

ಪ್ರೇಮಕ್ಕೆ ಒಡತಿಯಾಗಿ 

ಜೊತೆಯಾಗಿ ನಿಂತವಳು 

ಅಕ್ಕರೆಯ ಮಡದಿ

ಜೀವನದ ಏಳುಬೀಳುಗಳಿಗೆ

ಕಲ್ಲಾದಾಗ , ನಗಿಸಿ ಮನಗೆದ್ದವಳು

ಮಗಳಾಗಿಬಂದಿಹಳು

ಮನೆಯ ಐಸಿರಿಯಾಗಿ ಬಂದು

ಮನೆಮನವ ತುಂಬಿಹಳು ಸೊಸೆ

ಇಳಿ ಹರಯದಲಿ 

ಸಂತಸವ ತಂದವಳು 

ನೋವ ಮರೆಯಲು

ಸಹಕರಿಸಿದವಳು ಮೊಮ್ಮಗಳು

ಸಂಸ್ಕ್ರತಿಯ ಪ್ರತೀಕವಾಗಿ 

ಕಥೆಗಳಿಗೆ ಜೀವತುಂಬಿ 

ಬದುಕಿನ ಪಾಠವ

ಕಲಿಸಿದವಳು ಪ್ರೀತಿಯ ಅಜ್ಜಿ

ಇಹಲೋಕದ ಜೀವನದ 

ಕ್ಷಣಗಳ ಗಳಿಗೆ ಕೊನೆಯಾದಾಗ

ಆಸರೆ ನೀಡಲಿರುವ 

ಭೂಮಿತಾಯಿ ಹೆಣ್ಣು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics