STORYMIRROR

Ramamurthy Somanahalli

Classics Inspirational Others

4  

Ramamurthy Somanahalli

Classics Inspirational Others

ಕೃಷ್ಣನ ಮಹಿಮೆ

ಕೃಷ್ಣನ ಮಹಿಮೆ

1 min
389


ಏನ ಬಣ್ಣಿಸಲಿ ಕೃಷ್ಣ ನಿನ್ನ ಮಹಿಮೆಯನು

ಅರಿಯದಾದೆನು ನಿನ್ನ ನಾ ಪಾಮರನು


ಲೋಕದ ಸೃಷ್ಟಿ ಸ್ಥಿತಿ ಲಯಕರ್ತನೂ ನೀನೆ

ಜಗದಾದಿಯೂ ನೀನೆ, ಅನಂತವೂ ನೀನೆ

ಲೋಕದಿ ನೀನಿಲ್ಲದ ತಾಣವ ನಾ ಕಾಣೆನು


ಜಗಕೆ ಪಿತನೂ ನೀನೆ, ಸುತನೂ ನೀನೆ

ಮೂರ್ಜಗದಿ ವಂದ್ಯನೂ ನೀನೆ, ಮಾನ್ಯನೂ ನೀನೆ

ಜಗವ ರಕ್ಷಿಪ ಜಗದೊಡೆಯನೂ ನೀನೆ


ಬೆಣ್ಣೆ ಕದ್ದಾಡಿದ ಮುದ್ದು ಕಂದನೂ ನೀನೆ

ಗೋಪಿಕೆಯರ ಚಿತ್ತಕದ್ದ ಚೋರನೂ ನೀನೆ

ಗೋಗಳ ಕಾದ ಗೋಪಾಲಕನೂ ನೀನೆ


ಮುಪ್ಪಿಡಿ ಅವಲಕಿಗೆ ಅಷ್ಟೈಶ್ವರ್ಯವಿತ್ತವ ನೀನೆ

ಮೂರ್ಹೆಜ್ಜೆ ದಾನಕೆ ಮುಕ್ತಿ ಕರುಣಿಸಿದವ ನೀನೆ

ಗಿರಿಯೆತ್ತಿ ರಕ್ಷಿಸಿದ ಗೋವರ್ಧನನೂ ನೀನೆ.. ||ಏನ ಬಣ್ಣಿಸಲಿ||



Rate this content
Log in

Similar kannada poem from Classics