ಹಣ
ಹಣ
ಬದುಕಿನ ಆಸೆಗಳ ಪೂರೈಕೆಗೆ
ನಮಗೆ ಬೇಕು ಕಾಂಚಾಣ
ಹಸಿವ ನೀಗಲು ಬೇಕು ರೊಕ್ಕ
ಶಿಕ್ಷಣದ ಕನಸಿನ ನನಸಿಗೆ
ಇಂದು ಬೇಕಲ್ಲವೇ ಹಣದಗಂಟು..
ಉದ್ಯೋಗ ಬೇಟೆಗೆ
ಕಾಯಿಲೆಯ ಪರದಾಟಕ್ಕೆ
ನಮ್ಮ ಮುಂದಿರುವ ಪ್ರಶ್ನೆಯೇ ಹಣ
ಬದುಕಿನ ಮಿತಿಯಲ್ಲಿ
ಒಂದು ಸೂರಿಗಾಗಿ
ಪಡೆದ ಸಾಲದ ಬಡ್ಡಿಗಾಗಿ
ಕಾಡುತಿದೆ ಕಾಂಚಾಣ
ರೊಕ್ಕದಾ ಲೆಕ್ಕ ಕಾಡುತಿರಲು ಪಕ್ಕ
ಹೇಗೆ ಬದುಕ ಸಾಗಿಸಲಿ?
ಕಾಂಚಾಣದ ಮಾಯೆಯ ಬಲೆಯಿಂದ
ಹೇಗೆ ಬಿಡುಗಡೆಯ ಪಡೆಯಲಿ?
