ಹಳ್ಳಿಯ ಸೊಬಗು
ಹಳ್ಳಿಯ ಸೊಬಗು
ಚುಮು ಚುಮು ಇಬ್ಬನಿ ಕರಗಿದ ಮುಂಜಾನೆಗೆ ಸ್ವಾಗತ ನೀಡುವ ಹಕ್ಕಿಗಳಿಂಚರ
ಕತ್ತಲಾವರಿಸಿರುವ ಬೆಳಗಿನ ಕೋಳಿಗಳ ಕೂಗು ಕೇಳಿಯೇ ಏಳುವುದು ಹಳ್ಳಿಯ ಜನ
ಬಿಸಿಯಾಗಿ ಏನೋ ಕುಡಿಯೋಣವೆಂದರೆ,
ಅದಾಗಲೇ ಅಂಬಾ ಅನ್ನುವ ಪುಟ್ಟ ಕರುವಿನ ಕೂಗು ,
ಹಸು ,ಮೇಕೆ ಹಳ್ಳಿಯ ಬದುಕಿಗೆ ನಂಟು ಬೆಸೆದುಕೊಂಡಿರುವುದು.
ಸಾಕು ಪ್ರಾಣಿಗಳನ್ನು ಕುಟುಂಬದಂತೆ
ಕಾಣುವ ಮನಸ್ಥಿತಿ ಇರಬೇಕೇ ಎಲ್ಲರಿಗೂ
ಮುಂಗಾರಿನ ದಿನಗಳು ಬಿಡುವಿಲ್ಲದ ಕೆಲಸಗಳಿಗೆ ಆರಂಭ,
ಮುಸ್ಸಂಜೆಯವರೆಗೂ ಸುಳಿಯದು
ದಣಿವು ಆಯಾಸ,
ಹಣದ ಆಮಿಷಗಳಿಗೆ ಒಳಗಾಗದೆ
ಕೆಲಸದ ಒತ್ತಡಕ್ಕೆ ಬೇಸರಿಸದೇ
ದುಡಿವ ಕೈಗಳಿಗೆ ಹೇಳಲೇಬೇಕು ವಂದನೆ
ಉತ್ತಿ ಭಿತ್ತಿ ಬೆವರು ಸುರಿಸಿ
ಬೆಳೆದು ಅನ್ನ ನೀಡುವ ಅನ್ನದಾತರು
ಲಾಭದ ನಿರೀಕ್ಷೆಯಿರದೆ ಬೆಳೆದರೂ
ಕನಿಷ್ಠ ಗೌರವ ಸಿಗದು ರೈತರಿಗೆ
ಪುಟ್ಟ ಕಂದನ ರಮಿಸಲು ಸಮಯವಿಲ್ಲ
ಬೆಳಗಿನಿಂದ ಹೊಲದಲ್ಲಿ ದುಡಿವ ಹೆತ್ತವಳಿಗೆ
ಕಂದನ ಕಂಡು ಮರೆತು ಹೋಗುವುದು ದಣಿವೆಲ್ಲಾ
ಎಲ್ಲರೂ ಜೊತೆಗೂಡಿ ಕುಳಿತು ಮಾತಾಡಿ ಸಮಯ ಕಳೆಯುವ
ಹಳ್ಳಿಯ ಸೊಬಗು ಪಟ್ಟಣ ಸೇರಿದ ಮೇಲೆ ಮರೆಯಾಗಿ ಹೋಗಿದೆ ..
