ಹೆಣ್ಮಕ್ಕಳಿಗೊಂದು ಕಿವಿಮಾತು .....
ಹೆಣ್ಮಕ್ಕಳಿಗೊಂದು ಕಿವಿಮಾತು .....
ಓ! ಹೆಣ್ಣೆ ಕ್ಷಣಕ ಆಸಗೆ ಬೀಳಬೆಡ
ಮನೆಯ ನಂದಾದೀಪವಾಗಿರುವಿ
ಮನೆಯ ಸಂಸ್ಕಾರದ ಕಣ್ಣಾಗಿರುವಿ
ಸಮಾನತೆಯಲಿ ಸ್ವೇಚ್ಛೆಯಾಗಿರಬೇಡ
ಸಾಧನೆಯ ಪಥದಲ್ಲಿ ಹೋಗುತ್ತ
ಮರೆಯಬೇಡ ನಿನ್ನ ಮನೆಯತ್ತ
ಹುಟ್ಟಿಮೆಟ್ಟದ ಮನೆಗೆ ಕಣ್ಣಾಗಿರುತ್ತ
ಚಂಚಲಗೊಳಿಸಬೇಡ ನಿನ್ನ ಚಿತ್ತ
ಹಣ,ಕೀರ್ತಿ ಯಾವುದು ಶಾಶ್ವತವಲ್ಲ
ಸುಕಾರ್ಯದ ಮರ್ಯಾದೆ ಶಾಶ್ವತ
ಸಂಸ್ಕಾರ ಸಂಸ್ಕೃತಿಯೆ ಭೂಷಣ
ನಿನಗೆ ಇದುವೆ ನಿಜವಾದ ಸುಲಕ್ಷಣ
ಹಾದಿತಪ್ಪಿದರೆ ಬಲಿಪಶು ಕುಟುಂಬ
ಕಳೆದುಕೊಳ್ಳುವೆ ಹುಟ್ಟಿಪಡೆದ ಭಂಧ
ಕಾಲ ತಪ್ಪಿಹೋದ ಮೇಲೆ ಎನ್ ಚಂದ
ಚ್ಯುತಿ ಬಾರದೆ ನಡೆ ಬಾಳು ಅಂದ
