*ಹೆಮ್ಮೆಯಿಂದ ಹಾಡುನಮ್ಮದು ಕನ್ನಡ
*ಹೆಮ್ಮೆಯಿಂದ ಹಾಡುನಮ್ಮದು ಕನ್ನಡ
ಹೆಮ್ಮೆಯಿಂದ ಹಾಡು
ನಮ್ಮದು ಕನ್ನಡ ನಾಡು
ಕನ್ನಡ ಭಾಷೆ ನೀವಾಡಿ
ಗರ್ವದಿಂದ ಮಾತಾಡಿ
ಜನಿಸಿದ್ದೆ ಭಾಗ್ಯವು ನಾವಿಲ್ಲಿ
ಘರ್ಜಿಸಿ ನೀವು ಹೆಮ್ಮೆಯಲ್ಲಿ
ಮೇಲು ಕೀಳು ಭಾವ ನಮಗಿಲ್ಲ
ಎಂದಿಗೂ ನಮ್ಮ ಕನ್ನಡ ನಾಡಲ್ಲಿ
ದ್ವೇಷ ಮರೆತು ಪ್ರೀತಿ ಸುರಿಯಿರಿ
ಅಹಂಕಾರವ ತೊರೆದು ಬಾಳುತಿರಿ
ವಿಶ್ವಾಸ ಘಾತುಕರ ಮೈಯನ್ನು ಮುರಿ
ಶತ್ರುಗಳನ್ನು ಪ್ರೀತಿಯಿಂದ ಕಾಣುತಿರಿ
ಶಾಂತಿ ಮಂತ್ರವನ್ನು ಜಪಿಸಿ ಸತತ
ಕ್ರಾಂತಿಯಲ್ಲಿ ವಿಜಯವು ಅವಿರತ
ಸತ್ಯ ಅಹಿಂಸೆ ಪಾಲನೆಯು ನಿಶ್ಚಿತ
ತ್ಯಾಗಭೂಮಿ ನಮ್ಮ ನಾಡು ಶಾಶ್ವತ
