ಗಾಂಧಾರ !
ಗಾಂಧಾರ !
ಗಾಂಧಾರವಾಗಿತ್ತಂದು ಶಕುನಿಯ ಆಸ್ಥಾನ
ಅದುವೇ ಇಂದಿನ ಉಗ್ರರ ಆಫ್ಘಾನಿಸ್ತಾನ!
ಅಂದು ಅಲ್ಲಿತ್ತ ಶಕುನಿಯ ಕುಟಿಲ ನೀತಿ
ಅಲ್ಲಿಹುದಿಂದು ತಾಲಿಬಾನಿಗಳ ನೆತ್ತರ ಪ್ರೀತಿ!!
ಅಂದಿನ ಗಾಂಧಾರವೇ ಇಂದಿನ ಕಂದಹಾರ!
ರಕ್ತಪಿಪಾಸುಗಳ ಅಟ್ಟಹಾಸದ ಹಾಹಾಕಾರ!!
ಅಂದು ಕಣ್ಣಿಗೆ ಪಟ್ಟಿ ಕಟ್ಟಿದ್ದಳು ಗಾಂಧಾರಿ!
ಹೆಂಗಸರು ಆಗಬೇಕಿಂದು ಬುರ್ಖಾದಾರಿ!!
ಅದುವೇ ತಾಲಿಬಾನಿಗಳು ತೋರಿದ ದಾರಿ
ತಪ್ಪಿ ನಡೆದರೆ ತೋರುವರು ಯಮಪುರಿ!!
