ಏಲಿಯನ್
ಏಲಿಯನ್
ಅಪರಿಚಿತ ಜೀವಿಯಂತೆ
ಅದೃಶ್ಯವಾಗಿ ಇರುವುದಂತೆ
ಒಳ್ಳೆಯದೂ ಕೆಟ್ಟದ್ದೂ
ಇರುವುದಂತೆ
ಅದುವೇ ಏಲಿಯನ್ ಅಂತೆ॥
ಭೂಮಿಗೆ ಕಾಲಿಟ್ಟ
ಕ್ಷುದ್ರ ಜೀವಿ
ಜೀವವ ಕಾಡಿದ
ಅದೃಶ್ಯ ಕ್ರಿಮಿ
ಕೊರೋನ ವೈರಸ್ ಮಾರಿ॥
ಕಣ್ಣಿಗೆ ಕಾಣದೆ
ವೈದ್ಯ ಲೋಕಕ್ಕೆ ಸಿಗದೆ
ಮದ್ದಿಗೆ ಗುದ್ದು ಕೊಟ್ಟು
ಜಗವನ್ನೇ ಅಲುಗಾಡಿಸಿ
ಕಂಗೆಡಿಸಿದ ಏಲಿಯನ್ ಅದು॥
ಅಟ್ಟಹಾಸವ ಕಂಡು
ಬೆರಗಾದ ಮಂದಿ
ಸ್ವಚ್ಛತೆಯ ಪಾಠವನು
ಎಲ್ಲೆಡೆಯೂ ಪಾಲಿಸಿ
ಉತ್ತಮ ಅಭ್ಯಾಸಗಳ
ಮರಳಿತಂದಿತು ಈ ಏಲಿಯನ್॥
ದೇವರ ಭಯವೇ
ಜ್ಞಾನದ ಆರಂಭವಂತೆ
ಕಾಯಿಲೆಯ ಭಯವೇ
ಆರೋಗ್ಯಕೆ ಎಚ್ಚರಿಕೆಯಂತೆ
ಏಲಿಯನ್ನನ ಕಲ್ಪನೆಯು
ಕೆಟ್ಟ ಕನಸಿನ ಸೂಚನೆಯಂತೆ॥
