STORYMIRROR

Surabhi Latha

Classics Inspirational Others

4  

Surabhi Latha

Classics Inspirational Others

ಭಾರತ

ಭಾರತ

1 min
424

ಆಕಾಶದಲ್ಲಿ ಹಾರುತ, ಹಾಡುತ 

ಪ್ರೀತಿಯ ಸಂದೇಶ ಹರಡುತ 

ಬೇದ ಭಾವಗಳನ್ನು ಮರೆಸುವ 

ಜಗಕೆ ಸಂತಸ ಹಂಚುವ 


ಪದ ಪದಗಳು ಸೇರಿ 

ಪವಿತ್ರ ಕನ್ನಡ ನುಡಿಯಾಗಿದೆ 

ಕಸ್ತೂರಿ ಪರಿಮಳ ಬೀರಿದೆ 


ತೊದಲುವ ಸ್ವರವಲ್ಲ 

ತಡಕಾಡಿ ಹುಡುಕಬೇಕಿಲ್ಲ 

ಅಕ್ಷರಗಳೇ ಮುತ್ತುಗಳಾಗಿದೆಯಲ್ಲ 


ಸರಾಗವಾಗಿ, ಸುಂದರವಾಗಿ 

ಕೇಳುತಿರೆ ಇಂಪಾಗಿ, ಸೊಂಪಾಗಿ 

ಹರಿವ ನದಿಯಂತೆ ಕನ್ನಡ 


ಮೃದು ಮನಸ್ಸನ್ನು ತಟ್ಟಿ 

ಅನ್ಯ ಭಾಷೆಯ ತೊಳೆದು 

ಹಸನ್ಮುಖಿಯಾಗಿಸುವ ಕನ್ನಡ 


ನುಡಿಯುತಿರೆ ಸಿಹಿ ಸವಿದಂತೆ 

ಮೈ ಮನ ಪುಳಕಗೊಳಿಸಿ 

ಅಕ್ಷಯವಾಗಿಹುದು ನಮ್ಮ ನಾಡ 



Rate this content
Log in

Similar kannada poem from Classics