ಬಾರದಿರು ಎದುರಿಗೆ
ಬಾರದಿರು ಎದುರಿಗೆ
ಎಬ್ಬಿಸದಿರು, ಹಗಲುಗನಸ ಕಾಣುತಿರುವೆನು.
ಕಣ್ಣ್ತೆರೆ ಅನ್ನದಿರು, ಭ್ರಮೆಯಲ್ಲಿ ಕುಳಿತಿರುವೆನು.
ನಿಜ ಹೇಳದಿರು, ಹುಸಿಮಂಟಪವ ಕಟ್ಟಿರುವೆನು.
ನೀನು ಯಾರೆಂದು ಹೇಳದಿರು, ನನ್ನವಳೆಂದು ಕುಳಿತಿರುವೆನು.
ಎದುರಿಗೆ ಬಾರದಿರು, ನಿನ್ನ ಕಳೆದುಕೊಳ್ಳುವೆನು.

