ಅವಳು ನನ್ನವಳು
ಅವಳು ನನ್ನವಳು
ನನ್ನ ಪುಟ್ಟ ಮಗಳು
ಕೂತೂಹಲವನು ಪ್ರಶ್ನಿಸುವಳು
ಎಲ್ಲವನ್ನೂ ಕೇಳುವಳು
ನನ್ನಿಂದ ಅದ್ಭುತವಾದೊಂದು
ಉತ್ತರವನ್ನು ಎದುರು ನೋಡುವಳು
ಅಮ್ಮನೇನೋ ವಿಜ್ಞಾನಿಯೆಂದು
ತನ್ನಷ್ಟಕ್ಕೆ ತಾನೇ ನಂಬಿರುವಳು
ನನ್ನ ನಗೆಗೆ ಕಾರಣಳವಳು
ನನ್ನ ಜೀವನಕ್ಕೆ ಅರ್ಥ ಅವಳು
ಪ್ರತೀ ನೋವಿಗೂ ಮುಲಾಮು ಅವಳು
ಅವಳು, ನನ್ನವಳು. ನನ್ನ ಮಗಳವಳು.