ಅಪ್ಪಾ, ನೀನೊಂದು ಅದ್ಭುತವಷ್ಟೇ !
ಅಪ್ಪಾ, ನೀನೊಂದು ಅದ್ಭುತವಷ್ಟೇ !
ಕೇಳುವ ಮೊದಲೇ ಕೈಗಿಟ್ಟೆ
ಹೇಳುವ ಮೊದಲೇ, ಅರಿತುಬಿಟ್ಟೆ
ನನಗಾಗಿ ಅಡುಗೆಯಲ್ಲೂ ನುರಿತುಬಿಟ್ಟೆ
ಮಕ್ಕಳಿಗಾಗಿ ನಿನ್ನದೆಲ್ಲವನ್ನೂ ಕೊಟ್ಟೆ
ನನಗೋ ನೂರಾರು, ನಿನಗೇಕೆ ಮೂರೇ ಬಟ್ಟೆ?
ನಿನಗಾಗಿ ಬದುಕುವುದನ್ನೇ ಮರೆತು ಬಿಟ್ಟೆ
ನಮ್ಮನ್ನು ಗಟ್ಟಿಗೊಳಿಸುತ, ಸೋತಿವೆ ನಿನ್ನ ರಟ್ಟೆ
ಅಪ್ಪಾ, ನೀನೊಂದು ಅದ್ಭುತವಷ್ಟೇ
ನಿನ್ನ ಋಣ ತೀರಿಸಲು ನಾ ಮತ್ತೇ ಹುಟ್ಟಬೇಕಷ್ಟೆ
