STORYMIRROR

Vijaya Bharathi.A.S.

Classics Inspirational Others

3  

Vijaya Bharathi.A.S.

Classics Inspirational Others

ಸಾಧಕಿ

ಸಾಧಕಿ

1 min
923

ಸ್ತ್ರೀ ಎಂದರೆ

ಹಸಿರುಡುಗೆಯ ಪ್ರಕೃತಿ

ಉಸಿರ ನೀಡುವ ಮಾತೆ

ಅಶನವೀವ ಅನ್ನದಾತೆ

ಸ್ತ್ರೀ ಎಂದರೆ

ದುಷ್ಟ ನಿಗ್ರಹ ಶಕ್ತಿ

ಕಷ್ಟ ಧರಿಪ ಧರಣಿ 

ಇಷ್ಟ ಸಿದ್ಧಿಯ ದೇವಿ

ಸ್ತ್ರೀ ಎಂದರೆ

ಸ್ವಾರ್ಥ ರಹಿತ ತ್ಯಾಗಿ

ಮನ್ನಿಪ ಮಮತಾಮಯಿ

ಮನೆಯ ಮಹಾಲಕ್ಷ್ಮಿ

ಸ್ತ್ರೀ ಎಂದರೆ

ಮನೆ ಬೆಳಗುವ ಮಗಳು

ಕುಲ ಬೆಳೆಸುವ ಮಡದಿ

ಸಂಸಾರದ ಸರ್ವಸ್ವ

ಸ್ತ್ರೀ ಎಂದರೆ

ಮನೆಯಂಗಳದ ಮಲ್ಲಿಗೆ

ಮಂಗಳನೆಡೆ ನಡೆವ ಧೀರೆ

ಸರ್ವತೋಮುಖ ಸಾಧಕಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics