Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Jyoti desai

Drama

2  

Jyoti desai

Drama

ಜೋಗುಳ

ಜೋಗುಳ

1 min
143


ಭಾರತ ಭೂಮಿಯ ಪುಣ್ಯದ ಪುರುಷ

ನೆಂದವರ ಮನದಾಗ ನೆಲೆ ನಿಲ್ಲೋ ನಹುಷ

ಅಷ್ಟ ಮಠಗಳಲಿ ವೇದದುಧ್ಗೋಷ

ಇಂತಹ ಚೆಲುವ ಕಂದನ ತೂಗಿ ಪಾಡಿರೆ 

ಜೋ ಜೋ


ವಸುದೇವ ದೇವಕಿ ಗರ್ಭ ಸಂಜಾತ

ಯಶೋದೆ ನಂದರ ಮುದ್ದಿನ ಸುತ

ಬೃಂದಾವನದಲ್ಲಿ ಆಡಿಪಾಡುತ

ಇಂಥ ನ0ದರ ಕಂದನ ತೂಗಿ ಪಾಡಿರಿ 

ಜೋ ಜೋ


ಗೋಮಾತೆಯರನೆಲ್ಲ ಬೆಟ್ಟಕ್ಕೆ ಅಟ್ಟಿ

ಗೋಪಿಯರಿಗೆಲ್ಲ ಗೋಳಾಟ ಕಟ್ಟಿ

ಕೊಳಲ ನಾದಕೆ ಮರಳ ಮಾಡುತ್ತಿಟ್ಟಾನ ದಿಟ್ಟಿ

ಇಂತ ದೇವಕಿನಂದನ ತೂಗಿ ಪಾಡಿರೆ

ಜೋ ಜೋ


ಬೆಣ್ಣೆಯ ಕದ್ದ0ತಹ ಗೋಕುಲ ಧಾಮಿ

ಗೋಪಿಯರ ಮನಗೆದ್ದ ಮಣಿಮಕುಟ ಪ್ರೇಮಿ

ಕಾಳ ಸರ್ಪದ ಮೇಲೆ ಕುಣಿದಂತ ಸ್ವಾಮಿ

ಇಂಥ ವಸುದೇವ ಕ0ದನ ತೂಗಿಹಾಡಿರೆ

ಜೋ ಜೋ


ಬಾಲ ಲೀಲೆಗಳಲ್ಲಿ ಗೋಪಿಯರ ಮೆರಸಿ ರಾಧೆಯ ಮನದಲ್ಲಿ ಪ್ರೇಮದಿ ನೆಲೆಸಿ 

ಬಾಲ ಹೊಂಟಾನ ಮಥುರೆಯ ಅರಸಿ

ಇಂಥ ಯಶೋದೆಕಂದನ ತೂಗಿ ಪಾಡಿರೆ

ಜೋ ಜೋ


ವಿಷದಾಲು ಕೊಟ್ಟ ಪೂತನಿಯ ಕೊಂದು

ಚಕ್ರಾಸುರನ ಹೆಡೆಮುರಿ ಮುರಿದು

ಸೋದರ ಮಾವ ಕಂಸನ ಸದೆ ಬಡಿದು

ಇಂತಹ ಧೀರ ಕಂದನ ತೂಗಿ ಪಾಡಿರೆ 

ಜೋ ಜೋ


ಕೃಷ್ಣನೆಂಬ ನಿಜನಾಮಧೇಯದಿಂದ

ರುಕ್ಮಿಣಿಗೆ ಪತಿಯಾಗಿ ಭೂಮಿಗೆ ಬಂದ

ರಾಮ ಮುಕುಂದ ಮುರಳೀಧರನೆಂದ

ಹಿಂಗ ನೂರಾರು ಹೆಸರಿಂದ ತೂಗಿ ಪಾಡಿರೆ

ಜೋ ಜೋ 



Rate this content
Log in

More kannada poem from Jyoti desai