ರೈಲ್ವೇ ನಿಲ್ದಾಣ
ರೈಲ್ವೇ ನಿಲ್ದಾಣ
ಟ್ರೈನ್ ಆಗತಾನೆ platform ತಲುಪಿತ್ತು, ನನ್ನ ಕಣ್ಣಿಗೆ ಭಯಂಕರವಾದ ದೃಶ್ಯ , ಒಬ್ಬ ಯಾರು ಕೈಗೆ ಸಿಗದೆ ಓಡಿ ಹೋಗ್ತಾ ಇದಾನೆ ಅಲ್ಲಿನ ಜನ ಎಲ್ಲರೂ ಅವನ ಹಿಡಿಯಲು ಅವನ ಹಿಂದೇನೆ ಹಿಂಬಾಲಿಸಿದ್ದಾರೆ ಜೊತೇಲಿ ಕಳ್ಳ- ಕಳ್ಳ ಅಂತ ಒಬ್ಬ ಇನ್ನೊಬ್ಬ ,ಡ್ರಗ್ಸ್ ಮಾಫಿಯಾ ಅಂಥ ಇನ್ನೊಬ್ಬ ,ಹೀಗೆ ನಾನಾರೀತಿಯ ಪದಗಳಿಂದ ಅವನನ್ನು ಹಿಡಿಯಲು ಶತಪ್ರಯತ್ನ ಕೊನೆಗೆ platform end ಅಲ್ಲಿ ಸಿಕ್ಕಿಯೇ ಬಿಟ್ಟ ಎಲ್ರೂ ಅವನನ್ನು ಹೊಡಿಯೋಕೆ ಶುರು ಹಚ್ಕೊಂಡ್ರು ಏರೆಡು ನಿಮಿಷಗಳ ಕಾಲ ನಿಲ್ಲಲಿಲ್ಲ ಅವನ ಕಣ್ಣಲ್ಲಿ ಕಣ್ಣೀರು ಹಾಗೂ ದೇಹದಲ್ಲಿನ ರಕ್ತ ನಾ ಮುಂದೆ - ನಾ ಮುಂದೆ ಅನ್ನೋತರ ಪೈಪೋಟಿಗೆ ಬಿದ್ದು ಹರಿಯುತ್ತಿದ.ಅಲ್ಲಿದ್ದ ನನಿಗೆ ಯಾಕಾದ್ರೂ ಇವ ಕಳ್ಳತನ ಮಾಡಿದ ಮಾಡಿದ್ರು ಯಾಕೆ ಸಿಕ್ಕು ಬಿದ್ದ ಅನ್ನೋ ಆಲೋಚನೆ...ಅಷ್ಟರಲ್ಲಿ ನಿಲ್ಲಿ-ನಿಲ್ಲಿ ಅಂಥ ಅಲ್ಲಿಂದ white and white_ ಬಿಳಿ ಬಣ್ಣದ ಡ್ರೆಸ್ ಅಲ್ಲಿ ಪುಣ್ಯಾತ್ಮ ಒಬ್ಬ ಬಂದು ಎಲ್ಲರನ್ನು ದೂರ ಸರಿಸಿ ಹೇಳಿದ - ಈ ಮನುಷ್ಯ ಏನು ತಪ್ಪು ಮಾಡಿಲ್ಲ ಇವನು ಟಿಕೆಟ್ ತಾಗೊಂಡಿರ್ಲಿಲ್ಲ ಅಷ್ಟೆ. ಇದೇ ಸ್ಟೇಶನ್ ಅಲ್ಲಿರುವ ticket collector ನಾನು ಟಿಕೇಟ್ ಕೇಳಿದೆ ಅವನ ಹತ್ತಿರ ಇಲ್ಲದ ಕಾರಣ ಭಯಪಟ್ಟು ಗಾಭರಿ ಆಗಿ ಓಡಲು ಶುರು ಮಾಡಿದ, ಅಷ್ಟರಲ್ಲಿ ನನ್ನ ಜೊತಿಗಿದ್ದ ಪೊಲೀಸ್ ನೋಡಿ ಹೀಡಿರಿ ಅಂಥ ಅಲ್ಲಿದ್ದ ಜನಕ್ಕೆ ಹೇಳಿದ ಅವನು ಎಷ್ಟು ವೇಗವಾಗಿ ಓಡಿ ಹೋದನೋ ಅಷ್ಟೆ ವೇಗದಲ್ಲಿ ಅವನ ಮೇಲೆ ಎಲ್ಲರ ಭಾವನೆಗಳು ದಾರಿತಪ್ಪಿದ್ದವು ನಾ ಬರೋಸ್ಟ್ರಲ್ಲಿ ಈ ಅನಾಹುತ ಆಗಿ ಹೋಗಿದೆ ಅಂಥ ಹೇಳಿ ಅಲ್ಲಿಂದ ಅವನನ್ನು ಸಮಧಾನ ಮಾಡಿ ಕಳಿಸಿದರು ..
Don't escape from any problem just face it
Problem ಇಂದ ಪರಾರಿ ಆಗೋದು ಬೇಡ ಬದಲಾಗಿ ಎದುರಿಸಿ
