ವಸಂತ ಮಾಸ
ವಸಂತ ಮಾಸ
ಮಾಮರದ ಕೋಗಿಲೆ ಹಾಡುತಿದೆ ನೋಡು
ನೋಡುತಲಿ ಮೈಮರೆತು ನೀನೊಮ್ಮೆ ಹಾಡು
ಹಾಡಿನಲಿ ಹೊಸ ಭಾವವಿಂದು ನೀನಾಗುತಿರು
ನೀನಾಗುತಿರು ಚೇತನವು ಬಾಳಿನಲ್ಲಿ ಇಂದು
ಇಂದು ಚಿಗುರಿರುವ ಹೂಬನದ ಕಂಪು
ಕಂಪಿನಲಿ ಇಂಪಾದ ಸುಧೆಯನ್ನು ಬೆರೆಸು
ಬೆರೆಸುತಲಿ ಜನಮನದಲ್ಲಿ ನೀನು ನೆಲೆಸು
ನೆಲೆಸುತಲಿ ಸುಶ್ರಾವ್ಯ ವೀಣೆಯ ನುಡಿಸು
ನುಡಿಸೊಮ್ಮೆ ಹೃದಯದಿ ಮಧುರ ಗೀತೆ
ಗೀತೆಯಲಿ ಕೋಗಿಲೆಯ ಧ್ವನಿಯ ತುಂಬಿ
ತುಂಬಿರಲಿ ಮಧುರಗಾನ ಮನದಲ್ಲಿ ಇಂದು
ಇಂದು ನೀ ಹಾಡಿದರೆ ಕೋಗಿಲೆಯು ನಾಚಲಿ
ನಾಚುತಲಿ ಕೇಳಲಿ ನಿನ್ನಯ ಸಪ್ತ ಸ್ವರವು
ಸಪ್ತಸ್ವರದಲ್ಲಿ ಇರಲಿ ಶಾರದೆಯ ವರವು
