STORYMIRROR

manjula g s

Classics Inspirational Others

4  

manjula g s

Classics Inspirational Others

ರಕ್ಷಾಬಂಧನ

ರಕ್ಷಾಬಂಧನ

1 min
356

ಸಕಲ ಸ್ತ್ರೀ ಕುಲ ಬದುಕಿದು 

ತುಮುಲ ತುಡಿತ ಮನದಲಿ

ಮೂರು ಗಂಟಿನ ಹೆಸರಿನಲಿ

ಹೆತ್ತವರನು ಬಿಟ್ಟು ಬಂದುದು! 


ಬೆಟ್ಟದಷ್ಟು ಕಡುಕಷ್ಟ ಬಂದು 

ಕಾಡುವಾಗ ನಮ್ಮ ಸುತ್ತಲಲಿ

ದುಗುಡವ ಹೇಳುವೆ ಯಾರಲಿ

ತಾಯಿಯ ಮಮತೆ ನೆನೆವುದು!


ಇರೆ ಜೊತೆಗಾರ ಕೈ ಹಿಡಿದು 

ಸಂತೈಸಿದರೂ ಜೊತೆನಡೆದು

ರೇಶಿಮೆ ಗಂಟು ಮಧುರ ನಂಟು

ಹೆಣ್ಣಿಗೆ ತವರ ಕೊರಗುಂಟು! 


ಸೋದರ ಪ್ರೇಮ ಸಿರಿತನಕೆ

ಲೋಕವು ಸರಿವುದು ಹಿಂದಕೆ! 


Rate this content
Log in

Similar kannada poem from Classics