ಪುಸ್ತಕ
ಪುಸ್ತಕ
ಬದುಕ ಬೆಳಗುವ ಕಾರ್ಯದಲ್ಲಿ
ನಿರತನಾಗಿರುವೆಯೇ...
ಓ ಗೆಳೆಯ ಪುಸ್ತಕವೇ.......!!
ನಾನಂತೂ ಏಕಾಂಗಿತನವನ್ನು
ದೂರವಾಗಿಸಿಕೊಂಡಿಹೆ
ನಿನ್ನ ಗೆಳೆಯನನ್ನಾಗಿ ಪಡೆದ ಮೇಲೆ.
ಗೆಳೆಯನೇ ನಿನಗೊಂದು
ವಿಷಯ ಹೇಳಬೇಕು....
ಕೇಳುವೆಯ.....??
ನಿನ್ನಿಂದಾಗಿ ನಾನು ಬದುಕ
ಪಾಠ ಕಲಿತಿರುವೆ.....
ಹೋರಾಡುವ ಧೈರ್ಯ ಪಡೆದಿರುವೆ.
ಇತರರ ಒಳಿತನ್ನು ಬಯಸುವ ಮನ
ಇದೀಗ ನಿನ್ನ ಕಾರಣದಿಂದಾಗಿ
ನನ್ನದಾಗಿದೆ.......!!
ಬದುಕಿನಲ್ಲಿ ಇನ್ನೇನು ಬೇಕು,
ನಿನ್ನಂತ ಒಬ್ಬ ಗೆಳೆಯನಿದ್ದರೆ
ನಾನು ನನ್ನ ಬದುಕ
ಸಾರ್ಥಕವಾಗಿಸುವುದರಲ್ಲಿ
ಆಶ್ಚರ್ಯವೇನಿಲ್ಲ.......😊zz
