ಪಾತರಗಿತ್ತಿ
ಪಾತರಗಿತ್ತಿ
ರಂಗು ರಂಗಿನ ಹೂವುಗಳ ಅರಸಿ
ಎಲ್ಲಿಗೆ ಹೊಂಟಿ ನೀ ನನ್ನಯ ಸರಿಸಿ
ಹಿಡಿಯುವ ಕಾತುರ ಹುಟ್ಟಿಸಿ ನನಗೆ
ಓಡುವ ಆತುರ ತುಂಬಿದೆ ನಿನಗೆ
ಕೋಮಲ ಚಿಟ್ಟೆಯೇ ನಿಂತುಬಿಡು
ಮುಳ್ಳನು ಕೊಂಚವೇ ಸರಿಸಿಬಿಡು
ಅಲ್ಲಿಂದ ಇಲ್ಲಿಗೆ ದಿನವು ಹಾರದಿರು
ಪಾತರಗಿತ್ತಿ ನನ್ನೊಂದಿಗೆ ಆಡುತಿರು
ಚೆಂದದ ಸುಮಗಳನು ತಂದಿಡುವೆ
ಅಂದದ ಮನೆಯಲಿ ನಿನಗಿಡುವೆ
ಹಾರುವ ಚಟವನು ಬಿಟ್ಟುಬಿಡು
ನಲಿಯುತ ಸುಮ್ಮನೆ ಇದ್ದುಬಿಡು
