ಒಲವ ಭಾವ ಗೀತೆ
ಒಲವ ಭಾವ ಗೀತೆ


ಬೀಸಿರಲು ತಂಗಾಳಿ ಚಂದಿರನ ಬೆಳಕಲಿ
ಯಮುನೆಯ ತೀರದಿ ತೇಲಿ ಬಂತೊಂದು ಪಿಸುಮಾತು
ಮನಮೋಹಕ ಮುರಳಿಯ ರಾಗ
ಮಾಸವದು ಮಾಘ
ನಡೆದಿತ್ತು ಪ್ರೀತಿಯ ಸಂಭಾಷಣೆ
ರಾಧೆಗಾಗಿ ಶಾಮ ನೀಡಿದನೊಂದು ಆಣೆ
ನಸುನಾಚುತ ರಾಧೆಯು ನಗಲು
ಅರಳಿದಂತೆ ಕಮಲದ ಹೂವು
ಸ್ಫೂರ್ತಿಯು ನಿನ್ನ ನಗುವು
ಎನ್ನುತ ನುಡಿಸಿದ ಮಾಧವ ಕೊಳಲು
ಜೊತೆ ಇರೆ ನೀನು ಮರೆವೆ ಜಗವ
ಕಾಣದೆ ಹೋದರೆ ನೀ , ನೊಂದೆನು ಮಾಧವ
ಕುಣಿಯಿತು ಹೃದಯವು ಕೊಳಲಿನ ನಾದಕೆ
ಎಂದಳು ರಾಧೆ ಸೋತಂತೆ ಮೋಹಕೆ
ಕಣ್ಣ ಹನಿಯು ಕಣ್ಣ ಅಂಚಲಿ ಮೂಡಿತು
ದೂರವಾಗುವ ಸಮಯದಿ ಚಿಂತೆಯು ಕಾಡಿತು
ದೂರವಾಗಿದ್ದರು ಸನಿಹವಿರುವ ಜನ್ಮ ಜನ್ಮದ ಪ್ರೀತಿಗೆ
ರಾಧೆ ಶಾಮರ ಮೌನವೇ ಮಾತಾಯಿತು.