ಮನಕಲಕುವ ಹಬ್ಬ
ಮನಕಲಕುವ ಹಬ್ಬ
ಬಂತೆಂದರೆ ಹಬ್ಬಗಳು
ಮನಸ್ಸೊಲ್ಲಾಸ ನೆಲೆಯೂರಿದಂತ
ಕುಟುಂಬವೆಲ್ಲವೂ ಒಂದೇ ಕಡೆ ಸೇರಿ
ಸಂಭ್ರಮವನ್ನು ಆಚರಿಸುವ ಕ್ಷಣಗಳು
ಅದೆಷ್ಟೋ ಸುಂದ ವಯ್ಯ .....!
ಅಬ್ಬಾ. ಬದುಕಿನ ಸಂತಸವೆಲ್ಲವೂ
ಈ ಒಂದೇ ದಿನದಲ್ಲಿ ನೆಲೆ ನಿಂತಂತಿದೆ.
ಸೃಷ್ಟಿಯ ಸೃಷ್ಟಿಸಿದ ಸೃಷ್ಟಿಕರ್ತನೆ
ಸಂತಸವನ್ನು ಹಬ್ಬ ಎಂಬ ಹೆಸರಿನಿಂದ
ಜಗಕೆಲ್ಲ ಹಂಚಿದಂತೆ ಭಾಸವಾಗುತ್ತಿದೆ
ಈ ಗಳಿಗೆಯು ಬರೀ ಆಚರಣೆಗಾಗಿ ಅಲ್ಲ
ಮನಸ್ಸಿನ ಸಂತೋಷ ನೆಮ್ಮದಿಗಾಗಿ..
ಹಬ್ಬಗಳು ಬರಿ ಹಬ್ಬಗಳಲ್ಲ ಬದುಕಿನ
ಮೌಲ್ಯವ ತಿಳಿಸುವ ಸುಂದರ ಕ್ಷಣಗಳು...
