STORYMIRROR

Prajna Raveesh

Classics Inspirational Others

4  

Prajna Raveesh

Classics Inspirational Others

ಮನದಿಂಗಿತ

ಮನದಿಂಗಿತ

1 min
237

ತನ್ನೆಲ್ಲಾ ಆಸೆ, ಕನಸುಗಳ ಬದಿಗೊತ್ತಿ

ನಾಲ್ಕು ಗೋಡೆಗಳ ಮಧ್ಯೆ ದುಡಿಯುವಳು

ಮನೆ, ಮಕ್ಕಳು ಸಂಸಾರದ ತೂಗುಗತ್ತಿ

ಆಕೆಯ ಮೇಲಿರಲು ಶ್ರಮಿಸುವಳು ಹಗಲಿರುಳು


ಒಲೆಯ ಮೇಲಿಟ್ಟ ಚಹಾ ಕುದಿದು ಕುದಿದು ಬತ್ತುವಂತೆ

ಆಕೆಯ ಮನದಿಂಗಿತಗಳು ಕುದಿದು ಕುದಿದು ಬತ್ತತೊಡಗಿವೆ

ಬಿಸಿಯಾದ ದ್ರವದಿಂದ ದಟ್ಟನೆಯ ಹೊಗೆಯು ಮೆಲೇರುವಂತೆ

ಅವಳೆಲ್ಲಾ ಆಕಾಂಕ್ಷೆಗಳು ಮನದೊಳಗೆ ಮೆಲೇರಬಯಸಿವೆ


ಪಾತ್ರೆಯಿಂದ ಚಹಾವನ್ನಾಕೆ ಶೋಧಿಸತೊಡಗಿದಾಗ

ಅವಳ ಮನದ ತುಡಿತಗಳೆಲ್ಲಾ ಶೋಧನವಾದಂತೆ ಭಾಸವಾಯಿತು

ಬಿಸಿಯಾದ ಪರಿಶುದ್ಧ ಚಹಾವನ್ನು ಎಲ್ಲರಿಗೂ ಹಂಚತೊಡಗಿದಾಗ

ಬಿಸಿಯುಸಿರಿನಲೇ ಸಂಸಾರಕ್ಕಾಗಿ ಆಕೆಯ ಆಸೆಗಳ ತೊರೆಯಬೇಕಾಯಿತು


ಭಾರವಾದ ಹೃದಯದಿಂದ ಬಿದ್ದ ಕಣ್ಣೀರ ಹನಿಗಳನು ಸೆರಗಿನಲ್ಲಿ ಒರೆಸಿ

ಖುಷಿಯಿಂದ ಇರುವಳವಳು ಎಲ್ಲರೊಂದಿಗೂ ನಗು ನಗುತಾ

ಮನೆಮನಗಳ ಬೆಳಗಿಪ ದೇವತೆಯಿವಳು ತನ್ನ ಬಯಕೆಗಳ ದೂರವಿರಿಸಿ

ನಡೆಸುವಳು ಜೀವನವ ತನ್ನವರ ಖುಷಿಯಲ್ಲೇ ತನ್ನ ಖುಷಿ ಕಾಣುತಾ........


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics