ಮಳೆಯೇ ಮನೋಹರಿಯೇ!
ಮಳೆಯೇ ಮನೋಹರಿಯೇ!
ಮಳೆಯೇ ನೀ ಮೋಡದ
ಉದರಿಂದ ಭುವಿಗಿಳಿದು
ಬರುವ ಅಮೃತಧಾರೆ!
ಇಳೆಯ ಕೊಳೆಯ ತೊಳೆವ
ಉಲ್ಲಾಸದ ಜಲಧಾರೆ!
ಹಸಿರಿಗೆ ಉಸಿರ ನೀಡುವ
ವನಸಿರಿಗೆ ಮೆರುಗು ಕೊಡುವ
ಉಮೆ ನೀನು ಮಿನುಗುತಾರೆ!
ಮಣ್ಣಿಗೆ ಘಮವ ಉಣಿಸಿ
ತಣ್ಣನೆ ಗಾಳಿಗೆ ಸುಗಂಧವ ಲೇಪಿಸಿ
ಉರಿವ ರವಿಯ ತಂಪುಗೊಳಿಸಿ
ಕಾವೇರಿಯೊಳಗೆ ಸೇರಿಬಿಡುವ ನೀ
ಮಹೋಧರಿಯು, ಸುಭಗೆಯು!
ಕಲ್ಪನೆಯ ಪದಗಳಿಗೆ ನಿಲುಕದವಳು
ಮಳೆಯೇ ನೀ , ಮನೋಹರಿಯು..!!!
