ಮಲೆನಾಡಿನ ಮಳೆ
ಮಲೆನಾಡಿನ ಮಳೆ
ಮಲೆನಾಡಿಗೆ ಪನ್ನೀರ ಅಭಿಷೇಕ ಮಾಡಲು
ಬಂದೇ ಬರುವ ಮಳೆರಾಯ
ಮಾರುತಗಳ ಜೊತೆಗೂಡಿ
ಭುವಿಯ ತನುವ ತಂಪುಗೊಳಿಸಲು
ಮಲೆನಾಡ ಮನವನು ಮುದಗೊಳಿಸಲು
ಬಂದೇ ಬರುವ ವರುಣ ದೇವ
ಮರಗಿಡಗಳ ಪಿಸುಮಾತನು ಆಲಿಸಲು
ಬಾನಿಗೆ ಕಾಮನ ಬಿಲ್ಲನು ಬರೆಯಲು
ಮಲೆನಾಡ ಮನೆಜನಗಳ ನೋಡಲು
ಬಂದೇ ಬರುವ ಮಳೆರಾಯ
ಮೋಡದ ಉದರಿಂದ ಧುಮುಕುವ
ಬಂಗಾರದ ಹನಿಯಾಗಿ ಕಡಲ ಸೇರಿ ಮುತ್ತಾಗಲು
ಬಂದೇ ಬರುವ ಮಳೆರಾಯ
ಮಲೆನಾಡಿನ ಮನ ತಣಿಸಲು
ಬಂದೇ ಬರುವ ಮಳೆರಾಯ
ಮಲೆನಾಡಿಗೆ ಹಸಿರ ತೋರಣ ಕಟ್ಟಲು
ಬಂದೇ ಬರುವ ಬಂದಿರುವ ಅದಾಗಲೆ ಮಳೆರಾಯ!!
