ಕವಿತೆ ಜನಿಸಲೇ ಇಲ್ಲ
ಕವಿತೆ ಜನಿಸಲೇ ಇಲ್ಲ
ಕವಿತೆ ಜನಿಸಲೇ ಇಲ್ಲ
ಕಾವಂತು ಸಿಗಲೇ ಇಲ್ಲ
ಅಲ್ಲೊಮ್ಮೆ ಅರಳಿದ ಹೂ ನೋಡಿದೆ
ಮುದುಡಿದನ್ನು ನೋಡಿದೆ
ಹನಿ ಬೀಳುವುದನ್ನು ಕಂಡೆ
ಸರೋವರವಾಗಿದನ್ನು ಗ್ರಹಿಸಿದೆ, ಆದರೂ
ಕವಿತೆ ಜನಿಸಲೇ ಇಲ್ಲ
ಚಿಗುರಿದ ಎಲೆ ನಾಚಿತ್ತು
ಸೊರಗಿ ಒಣಗಿತ್ತು
ಹಸುಳೆ ನಕ್ಕಿತ್ತು, ಬಿಟ್ಟರೆ
ಬಿಕ್ಳಿಸಿ ಕಣ್ಣಲಿ ಕಣ್ಣೀರಾಗಿತ್ತು , ಆದರೂ
ಕವಿತೆ ಜನಿಸಲೇ ಇಲ್ಲ
ಕಾಮನಬಿಲ್ಲು ಮೂಡಿತ್ತು
ಬಾನೆದೆಯೊಳಗೆ ಇಳಿದಿತ್ತು
ಆ ಬಾನು ಗುಡುಗಿತ್ತು
ಈ ಹೃದಯ ನಡುಗಿತ್ತ, ಆದರೂ
ಕವಿತೆ ಜನಿಸಲೇ ಇಲ್ಲ
ಕಾಗೆ ಕೂಗಿತ್ತು
ಕೋಗಿಲೆ ಹಾಡಿತ್ತು
ನದಿ ಹರಿದಿತ್ತು
ಕಡಲು ಕುಣಿದಿತ್ತು, ಆದರೂ
ಕವಿತೆ ಜನಿಸಲೇ ಇಲ್ಲ
ಅವ್ವನ ಮುತ್ತಿತ್ತು
ಅಪ್ಪನ ತುತ್ತಿತ್ತು
ಗೆಳೆಯನ ಕಾಳಜಿಯಿತ್ತು
ಅವಳ ಒಲವಿತ್ತು, ಆದರೂ
ಕವಿತೆ ಜನಿಸಲೇ ಇಲ್ಲ
ಕಾವಂತು ಸಿಕ್ಕಿತು
