ಕಂದನ ಕೈ ಬೆರಳ ಸ್ಪರ್ಶ
ಕಂದನ ಕೈ ಬೆರಳ ಸ್ಪರ್ಶ
ಗರ್ಭದಾಚೆ ಕಾಲಿಟ್ಟಾಗ
ಭಯಗೊಂಡಿದ್ದ ನನಗೆ
ಅಮ್ಮನ ಕೈಬೆರಳ ಸ್ಪರ್ಶ
ಧೈರ್ಯ ನೀಡಿತು.
ನಡೆಯಲು ಯೋಚಿಸಿದ ನನಗೆ,
ಅಪ್ಪನ ಕೈಬೆರಳ ಸ್ಪರ್ಶ
ಆತ್ಮವಿಶ್ವಾಸ ನೀಡಿತು.
ಮಗಳು ಮಡಿಲು ತುಂಬಿದಾಗ
ಅವಳ ಕೈಬೆರಳ ಸ್ಪರ್ಶ
ನನಗೆ ಜಗತ್ತನ್ನೇ ಮರೆಸಿತು.
ಆ ಕೈಬೆರಳ ಸ್ಪರ್ಶ ನನ್ನ ನೋವನ್ನು ಶಾಶ್ವತವಾಗಿ ಮರೆಸಿತು.
