ಹೊಂಗಿರಣ
ಹೊಂಗಿರಣ
ಹೊಂಗಿರಣ ಸೂಸುತಲಿ ಹೊನ್ನ ಕಿರಣವನು ಚೆಲ್ಲಿದೆ ಧರೆಯಲಿ
ಧರೆಯಲಿ ಭರವಸೆಯ ದಿನವನು ನೀ ಬಂದು ತುಂಬಿದೆ
ತುಂಬಿದೆ ಬಾಳಿನಲಿ ಹೊಸದಾದ ಕನಸುಗಳನು ನೀನಿಲ್ಲಿ
ನೀನಿಲ್ಲಿ ಬರಲು ಕನಸುಗಳ ಈಡೇರಿಸುವ ತವಕದಲಿ ಸಾಗುತಿರುವೆವು
ಸಾಗುತಿರುವೆವು ನಾವು ಆಸೆಗಳ ಹೊತ್ತು ಜಗದಲಿ
ಜಗದಲಿ ನಿನ್ನಂತೆ ಬೆಳಗಬೇಕಿದೆ ನಿತ್ಯ ಜೀವನದಲಿ
ಜೀವನದಲಿ ಎಲ್ಲರೂ ಪೂಜಿಸುವರು ನಿನ್ನನ್ನು ದಿನದಾರಂಭದಲಿ
ದಿನದಾರಂಭದಲಿ ಹೊಸಚೇತನ ನೀಡುತಲಿ ದಾರಿ ತೋರಿಸುವೆ
ತೋರಿಸುವೆ ನೇಸರನೇ ಮುಸ್ಸಂಜೆಯಲಿ ರಮಣೀಯ ದೃಶ್ಯವನು
ದೃಶ್ಯವನು ನೋಡುತಲಿ ಕಣ್ಮನವ ಸೆಳೆಯುವೆ ಬದುಕಿನಲಿ
ಬದುಕಿನಲಿ ಅಪಜಯವ ಲೆಕ್ಕಿಸದೆ ಸಾಗುತಿರಲು
ಸಾಗುತಿರಲು ಸಾಧಿಸುವ ಛಲವನು ಸಂತಸದಿ ನೀನು ನೀಡಿದೆ
