STORYMIRROR

Geethasaraswathi K

Classics Inspirational Others

3  

Geethasaraswathi K

Classics Inspirational Others

ಹೀರೋ

ಹೀರೋ

1 min
132

ಚಲನಚಿತ್ರವ ನೋಡುವ ಜನರಿಗೆ

ಪರಿಚಿತವಾಗಿಹ ಪಾತ್ರಗಳು 

ನಾಯಕ ನಾಯಕಿ ಪಾತ್ರದ ಜೊತೆಗೆ

ಹೆಸರನು ಗಳಿಸಿಹ ಖಳನಾಯಕನು॥

ಉತ್ತಮ ಗುಣಕೆ ,ಒಳ್ಳೆಯ ಮಾತಿಗೆ

ಕಿರಿಯರ ಪಾಲಿಗೆ ದೇವರೇ ಆಗಿಹನು 

ಕಷ್ಟಗಳೆಲ್ಲವ ಮೆಟ್ಟಿ ನಿಂತಿಹ ನಾಯಕ

ನಮ್ಮಯ ಬಾಳಿಗೆ ಆದರ್ಶವಾಗಿಹನು ॥

ನಮ್ಮಯ ಬದುಕಿನ ಓಟದಲಿ 

ಬರುತಿಹ ಸವಾಲಿನ ಕೂಟದಲಿ 

ಮಕ್ಕಳ ಏಳಿಗೆ ಬಯಸುತ ದುಡಿಯುವ

ಅಪ್ಪ ಅಮ್ಮನೆ ಹೀರೋಗಳು ॥

ಅವರಿಬ್ಬರ ಆದರ್ಶವನೆ ನಮ್ಮಯ ಬಾಳಲಿ

ದಿನಚರಿಯಾಗಿ ಪಾಲಿಸುತಲಿ 

ಕನಸಿನ ನನಸಿಗೆ ಹಗಲಿರುಳೆನ್ನದೆ 

ಶ್ರಮಿಸುತ ನನಸಾಗಿಸೋಣ


साहित्याला गुण द्या
लॉग इन

Similar kannada poem from Classics