STORYMIRROR

Vaishnavi S Rao

Classics Others Children

4  

Vaishnavi S Rao

Classics Others Children

ಹಬ್ಬ ಬಂದಿದೆ

ಹಬ್ಬ ಬಂದಿದೆ

1 min
379

ದೀಪಾವಳಿ ಹಬ್ಬ ಹಬ್ಬ ಬಂದಿತು

ಜಾತ್ರಾ ವಿಧಿವಿಧಾನಗಳ ಹಬ್ಬ ನಡೆಸಿತು

ದೇವಿ ಪ್ರತಿಷ್ಠಾಪನೆಯನ್ನು ನೆರೆವೇರಿಸಿತು

ಜೈ ಜೈ ದೇವರಿಗೆ ಹೇಳಿರಿ ಎಲ್ಲರೂ


ವಿರಾಟ ನಗರದ ಚರಿತ್ರೆಯನ್ನು ತಿಳಿಯೋಣ

ಮಾರಿಕಾಂಬಾ ಅಮ್ಮನಿಗೆ ನಮಸ್ಕಾರಿಸೋಣ

ವೈಶಾಖ ಶುದ್ಧ ಅಷ್ಟಮಿ ಪೂಜೆ ಮಾಡೋಣ

ಭಕ್ತಿ ಭಾವದಿಂದ ಅಮ್ಮನ ಭಜಿಸೋಣ


ಕೆಂಪು ಚಂದನ ಹಚ್ಚಿಕೊಂಡಿರುವವಳು

ನಗುಮೊಗದ ಸುಂದರಿ ದೇವತೆ ಇವಳು

ಭಕ್ತಿಯಿಂದ ಮುಕ್ತಿಯನ್ನು ನೀಡುವವಳು

ಶಕ್ತಿ ಭಕ್ತಿ ಹಸ್ತದಲ್ಲಿಯೇ ಹೊಂದಿದವಳು


ವೃಕ್ಷಪೂಜೆಯನ್ನು ನಡೆಸೋಣ ಎಲ್ಲರೂ

ಕೈ ಜೋಡಿಸಿ ಭಕ್ತಿಯಿಂದ ನಮಿಸಬೇಕು

ಬನ್ನಿರಿ ಎಲ್ಲರೂ ಹಬ್ಬಕ್ಕೆ ಹೋಗೋಣ

ಮುಕ್ತಿ ಕೊಡು ಅಮ್ಮ ನುಡಿಯಬೇಕು


Rate this content
Log in

Similar kannada poem from Classics