# ಗಗನದ ಚಂದ್ರಮ #
# ಗಗನದ ಚಂದ್ರಮ #
ನೀಲಿಯ ಬಾನಲಿ ತೇಲಿದ ಚಂದಿರ
ಹಾಲಿನ ಬಣ್ಣ ಹೊಂದಿಹನು
ಚುಕ್ಕಿಯ ನಡುವಲಿ ಚಕ್ಕನೆ ನೋಡುತ
ನಕ್ಕಿತು ಶಶಿಯ ಮೈಮನವು
ತಂಟೆಯ ಮಾಡುವ ತುಂಟನ ಮುಖದಲಿ
ತುಂಟನೆ ನಗೆಯ ತುಂಬಿದನು
ತಂಪನು ನೀಡುತ ಇಂಪಲಿ ಹಾಡುತ
ಮಂಪರು ಅಳಿಸಿ ನಿಂತಿಹನು
ಮೋಡವು ತುಂಬಲು ನೋಡಲು ಕತ್ತಲು
ಆಡಲು ಇಲ್ಲ ಚಂದಿರನು
ಶಶಿಧರ ಮರಳಲು ದಶೆಯನು ತರುವನು
ನಶೆಯನು ಓಡಿಸಿ ನಗಿಸುವನು
ಗಗನದ ತುಂಬಾ ನಗುವಿನ ಬಿಂಬವು
ಮಗುವಿನ ಕಣ್ಣು ಸೆಳೆದಿಹದು
