ಬಂಧನದ ಹಣತೆ
ಬಂಧನದ ಹಣತೆ
ಶ್ರಾವಣ ದಿನ ಶಾವಿಗೆ ಮಾಡಿಸಿ,
ದಾರ ಪೋಣಿಸಿ,
ರಕ್ಷಾ ಕವಚ ತಯಾರಿಸಿ
ಸಹೋದರರನ್ನು ಕೂರಿಸಿ
ದೀಪ ಬೆಳಗಿದೆ ಸದ್ದಿಲ್ಲದೇ
ಮನಸ್ಸು ಕರಗಿದೆ
ರಕ್ಷಾಕಾಗಿ ರಾಖಿ ಕಟ್ಟಿದೆ
ಸಹೋದರರ ಹೃದಯ ತಟ್ಟಿದೆ
ಕುಂಕುಮ ಹಚ್ಚಿದೆ ಸಿಹಿ ಉಣ್ಣಿಸಿದೆ,
ಸಹೋದರರ ಉಡುಗೊರೆಗಾಗಿ ಕಾದಿದ್ದೆ
ಚೆಂದದ ಉಡುಗೆಯಲ್ಲಿ
ಚಿನ್ನದ ಉಂಗುರ ಹೊಳೆಯುತ್ತಿತ್ತು,
ನನ್ನ ಕಣ್ಣುಗಳು ಮಿನುಗಿತು.
ಸಹೋದರರ ಬಂಧನದ ಹಣತೆ ಉರಿಯುತ್ತಿತ್ತು.