STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಬಲ್ಲಾಡ್ ಕವನ:- ಕೈವಾರ ತಾತಯ್ಯ

ಬಲ್ಲಾಡ್ ಕವನ:- ಕೈವಾರ ತಾತಯ್ಯ

1 min
422

SM-Boss

ಟಾಸ್ಕ-೦೪

ಬಲ್ಲಾಡ್ ಕವನ:-- ಕೈವಾರ ತಾತಯ್ಯ


ಬೆಂಗಳೂರ ಚಿಕ್ಕಬಳ್ಳಾಪೂರ ಪುಣ್ಯಕ್ಷೇತ್ರ

ಕೈವಾರ ಸಕಲವು ಕೈಗೂಡುವ ಧಾಮವಿದು

ದ್ವಾಪರದಿ ಏಕಚಕ್ರನಗರವೆಂದಿಹರು ಸ್ಥಳ

ಭೀಮನು ಪ್ರತಿಷ್ಟಾಪಿಸಿದ ಲಿಂಗೇಶ್ವರನ ಸ್ಥಳ

ಜಲಿಜ ಜಾತಿಯಲಿ ಧರೆಯ ತಮವ ಕಳೆಯಲು

ಮುದ್ದಮ ಕೊಂಡಪ್ಪ ದಂಪತಿಗಳು ವರವನು 

ಅಮರನಾರಾಯಣ ಭಕುತಿಯ ಪೂಜಿಸಿ

ಅನುಗ್ರಹದಿ ಮುದ್ದಮ್ಮ ಗರ್ಭ ಧರಿಸಿಹಳು

ಗರ್ಭದಿ ಶಿಶುವು ಸಂಸ್ಕಾರದಿಂದರಲು

ಸೋದರತ್ತೆಯ ಕಪಟತನದಿ‌ ಪಾಠ ಕಲಿಸಲು

ಆದಿಶೇಷನು ಬಂದು ಗರ್ಭ ಸಂರಕ್ಷಿಸಲು

ಹದಿನೇಳನೆ ಶತಮಾನದಿ ಪುತ್ರ ರತ್ನ ಹೆತ್ತಿರಲು

ಅಮರನಾರಯಣ ಕೃಪೆದಿ ನಾರಾಯಣನಾಗಿ

ಬಾಲ್ಯದಿ ತಂದೆತಾಯಿ ಇಹಲೋಕವಾಗಿರಲು

ಅಮರನಾರಾಯಣ ಅರ್ಚಕರ ಆಶ್ರಯದಿರಲು

ವಿಷಯದಿ ಆಸಕ್ತಿಯಿಲ್ಲದ ಭಕುತನಾಗಿ

ಕನ್ನಡ,ತೆಲಗು,ಸಂಸ್ಕ್ರತ ಭಾಷೆ ಪ್ರವೀಣನಾಗಿ

ಸೋದರತ್ತೆ ಮಗಳು ಮುನಿಯಮ್ಮ ವರಿಸಿದರು

ಪುತ್ರತ್ರಯರಿಗೆ ಇಹದ ಜನಕನಾಗಿ ಇದ್ದಿರಲು

ಸಂಸಾರ ನೊಗಕ್ಕೆ ಬಳಿಗಾರನಾಗಿ ಹೋರಡಲು

ಬಳೆಯ ಮಾರಾಟದಿ ಬರಿಗೈಲಿ ಹಿಂದಿರುಗಿರಲು

ಮುನಿಯಮ್ಮಳಿಗೆ ಸಂಸಾರ ನೊಗದ ಚಿಂತೆ

ನಾರಾಯಣರಿಗೆ ಅಧ್ಯಾತ್ಮದ ಸದ್ಚಿಂತೆ

ಯೋಗಪುರುಷರು ಕಿವಿಯಲಿ ಉಸಿರಿದರು

"‌ಓಂ ನಮೋ ನಾರಾಯಣ" ಬೀಜಾಕ್ಷರವನು

ನರಸಿಂಹ ಗುಹೆಯಲಿ ಅನುಷ್ಟಾನಗೈದರು

ಮೂರು ವರುಷಕ್ಕೆ ಉಗ್ರತಪವಗೈದರು

ಜಿಹ್ವೆಯದಿ ಬೆಣಚು ಕಲ್ಲು ಸಕ್ಕರೆಯಾಯಿತು

ಆಧ್ಯಾತ್ಮ ರಹಸ್ಯ ಭೇಧಿಸಿ ಕಾಲಜ್ಞಾನ ಸಾರಿದರು

ನಮ್ಮ ಪ್ರಿಯಕೃಷ್ಣ ಕೈವಾರ ತಾತಯ್ಯನವರು


  


Rate this content
Log in

Similar kannada poem from Classics