ಅನ್ನದಾತ
ಅನ್ನದಾತ
ಜಗದೊಡೆಯನೆಂಬುದು ದಿಟ
ರಕ್ತವಿಲ್ಲ ಮಾಂಸವಿಲ್ಲ
ಜೀವಂತ ಶವ...
ಬೆಂಗಾಡಿನಲ್ಲಿ
ಹಸಿರ ಅರಳಿಸುವನು
ತುತ್ತು ಅನ್ನಕ್ಕೆ ಅಳುವನು...
ಸುಡುಬಿಸಿನಲ್ಲಿ
ಭುವಿಗೆ ತಂಪಾಗಿಸುವನು
ಬಯಲಲಿ ಪವಡಿಸುವನು...
ಜೀವವಿದೆ
ಶ್ರಮದ ಉಸಿರು
ಭರವಸೆಗಳೇ ಬಸಿರು...
ಹಸಿರಿದೆ
ಹಸಿರು ನೋಟ
ಕನವರಿಕೆಯೇ ಬದುಕು...
ಕಾಯಕವಿದೆ
ಹೊಂಗನಸುಗಳ ಬಿತ್ತನೆ
ಸಾಲದ ಶೂಲವೇ ಪ್ರತಿಫಲ...
ಇವನೇ ನಮ್ಮ ಅನ್ನದಾತ
ದೇಶದ ಬೆನ್ನೆಲುಬು
ತಪ್ಪಿಲ್ಲ ಮುಗಿಲ ನೋಟ...