STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಅಮೃತಮತಿ

ಅಮೃತಮತಿ

1 min
523


     

 ನಮ್ಮನ್ನು ಈ ಪ್ರಪಂಚಕ್ಕೆ 

 ಕಣ್ಣು ತೆರೆಸಿದವಳು ಅಮೃತಮತಿ 

 ಅವಳು ನಮ್ಮೆರಡು ಕಣ್ಣು 

ಅರ್ಥವಿಲ್ಲದ ಸಂಸ್ಕಾರಗಳಿಗೆ 

ತಲೆಯಾಡಿಸಿ ಹಿರಿಯರ ಮಾತಿಗೆ 

ಕೊರಳೊಡ್ಡಿ ಹೊಸ್ತಿಲುದಾಟಿ 

ಮೂರುಗಂಟು ಹಾಕಿಕೊಂಡವಳು 


ಯಾರದೋ ಆಸೆಗೆ ಬಲಿಯಾಗಿ 

ಇಷ್ಟವಿಲ್ಲದಿದ್ದರೂ ಬಲವಂತವಾಗಿ 

ಹಾಸಿಗೆಯಲ್ಲಿ ಮನಸ್ಸಿಲ್ಲದೇ

ದೇಹ ಕೊಟ್ಟವಳು 

ಮೊಂಬತ್ತಿಯಂತೆ ಹನಿಹನಿಯಾಗಿ ಕರಗಿದವಳು 

ಸಮಾಜದ ನಿಂದನೆಗಳಿಂದ ಬೆಂದು 

ಬದುಕು ಕಟ್ಟಿಕೊಂಡವಳು 


ಅರ್ಥ ಮಾಡಿಕೊಳ್ಳದೆ 

ಬದುಕಿನ ಬಂಡಿ ಎಳೆಯದ 

ಪತಿಯ ಹೊಡೆತಕ್ಕೆ 

ಬೆನ್ನು ಕೊಟ್ಟವಳು 

ಬದುಕಿನುದ್ದಕ್ಕೂ ಮಕ್ಕಳಿಗೆ ,

ಗಂಡಸರಿಗೆ , ಹೆತ್ತವರಿಗೆ ,

ಸಮಾಜದ ಬಂಧುಗಳಿಗೆ 

ಪ್ರೀತಿಯನ್ನು ಧಾರೆಯೆರೆದವಳು 

ಈ ಅಮೃತಮತಿ !


Rate this content
Log in

Similar kannada poem from Classics