ಅಮ್ಮ
ಅಮ್ಮ
ಆಸೆಯಿದ್ದರೂ..
ಮಕ್ಕಳಾಸೆಯಲ್ಲೇ
ಕೊನೆಗೊಳ್ಳುವಾಕೆ l
ಹರಿದ ಸೀರೆ..
ಕುಪ್ಪಸಗಳು..
ಹೊಲಿಗೆಗಳಿರಲಿ..
ಎಷ್ಟಾದರೂ..l
ಅದುವೇ ಅಲಂಕಾರವೆಂದು
ಬೀಗುವಾಕೆ
ಬೇನೆ ಒಂದೇ ಎರಡೇ..?
ಸಹಿಸುವಿಕೆ ಬದುಕಿಸಿದೆ
ತಾಯಿಯೇ ಹಾಗೇ..l
ದೇವತೆ ಅಂದರೆ
ತಪ್ಪಾದೀತು?
ಅದಕೂ ಶ್ರೇಷ್ಠ l
ಒತ್ತಡ ನಿರ್ವಹಣಾಧಿಕಾರಿ
ತರಬೇತಿ ಹುಟ್ಟಿನಿಂದಲೇ
ಬಂದಿರಬೇಕು
ಹೆಣ್ಣಲ್ಲವೇ?..l
ಕರುಳಿನ ಜೊತೆಗೆ
ರಕುತ ಕೊಟ್ಟು
ಭಕುತಿ ಮೀರಿ
ಬದುಕ ಕೊಟ್ಟಾಕೆ..l
ಅನೇಕಕಡೆ
ಹೊಗಳುವುದಿದೆ..
ಹೋಲಿಸುವುದಿದೆ..
ತಪ್ಪಾದೀತು..l
ಯಾವ ಹೋಲಿಕೆ ಸಾಧ್ಯ
ತಪಃಶೀಲ ಮೈತ್ರಿಗೆ?
ಅಮ್ಮ
ಎಂದರಷ್ಟೇ ಸಾಕು
ಅದುವೇ ಜಗ..ll
