STORYMIRROR

Ramamurthy Somanahalli

Classics Inspirational Others

4  

Ramamurthy Somanahalli

Classics Inspirational Others

ಸುಧಾಮೂರ್ತಿಗೆ ಶಿರಬಾಗೋಣ

ಸುಧಾಮೂರ್ತಿಗೆ ಶಿರಬಾಗೋಣ

1 min
386


ನಗುವೇ ಆಭರಣ, ನಯವಿನಯಗಳೇ ಭೂಷಣ

ವಾಗ್ದೇವಿಯ‌ ಮಾತಿನಲಿ ಹುದುಗಿಹುದು ಹೂರಣ

ಒಲಿದಿರೆ ಲಕ್ಷ್ಮೀ ನೀಡುವರು ಕೈಯೆತ್ತಿ ಝಣಝಣ ಕಾಂಚಾಣ

ಕಾಯಕವೇ ಕೈಲಾಸವೆಂದ ಸಾಧಕಿಗೆ ಶಿರಬಾಗಿ ನಮಿಸೋಣ


ಪತಿಯ ಇಂಗಿತವರಿತು ಸದಾ ನಡೆವ ಸಹಧರ್ಮಿಣಿ

ಅನುದಿನವೂ ಕಷ್ಟಗಳನೆದುರಿಸಿ ಅಡಿಯಿಟ್ಟ ಸಹಚಾರಿಣಿ

ಚಿನ್ನಾಭರಣಗಳ ತೊರೆದು ಧರಿಸಿದರು ಕರಿಮಣಿ

ಇನ್ಪೋಸಿಸ್ ಆಧಾರ ಸ್ತಂಭವೀ ಕನ್ನಡ ಕಣ್ಮಣಿ


ಕಲ್ಲು ಮುಳ್ಳುಗಳ ಹಾದಿಯ ಕ್ರಮಿಸಿ ಗಳಿಸಿಹರು ಕೀರ್ತಿ

ಸಾಧಕರ ಸಾಧನೆಗೆ ಸುಧಾಮೂರ್ತಿಯೇ ಸ್ಫೂರ್ತಿ

ದುಡಿಯಲು ಕಾಯಕವಿತ್ತು ಹಸಿದವಗೆ ಅನ್ನವನಿತ್ತ ಕರುಣಾ ಮೂರ್ತಿ

ಪದ್ಮಶ್ರೀ ಪಡೆದ ದಿಟ್ಟೆ ಕಡಲಾಚೆಗೂ ಪಸರಿಸಿಹರು ದೇಶದ ಕೀರ್ತಿ


ಸತಿಪತಿಗಳ ನಡೆ-ನುಡಿ ಎಮಗೆ ದಾರಿದೀಪ

ಕೋಟಿ ಕೋಟಿ ಮನಮಂದಿರದಿ ಬೆಳಗಿದ ದೀಪ

ದೀನದಲಿತರ ಬಾಳಿಗೊಲಿದ ಆಶಾದೀಪ

ಇವರೆಮ್ಮ ಆಸ್ತಿ, ದೇಶದ ಕೀರ್ತಿ ನಂದದ ನಂದಾದೀಪ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics