ಸಾಧನೆ
ಸಾಧನೆ
ಸಾಧನೆಯ ಹಾದಿ ಸುಲಭವಲ್ಲ
ಚಿಂತೆಯಲ್ಲಿ ಸಮಯ ಕಳೆಯುವುದು ತರವಲ್ಲ
ಅವಮಾನ ನಿಂದನೆ ಇರುವುದು ಸಹಜ
ಸಾಧಿಸಿದ ನಂತರ ಹೊಗಳುವುದು ಸಮಾಜ
ಸಾಧನೆಗೆ ಬೇಕು ಗುರುವಿನ ಮಾರ್ಗದರ್ಶನ
ಪರಿಶ್ರಮಿಸಲು ಸಿದ್ಧವಿರಬೇಕು ಮನ
ಎದುರಾಗುವುದು ಸೋಲು ಕಷ್ಟಗಳು ನೂರಾರು
ಎಲ್ಲವನ್ನೂ ಹಿಮೆಟ್ಟಿ ಕೀರ್ತಿ ಶಿಖರವ ಏರು
ಜಗದಲಿ ಯಾವ ಕೆಲಸವೂ ಶ್ರೇಷ್ಠವಲ್ಲ ಕನಿಷ್ಟವೂ ಅಲ್ಲ
ಛಲ ಆತ್ಮವಿಶ್ವಾಸ ಇಲ್ಲದಿದ್ದರೆ ಸಾಧಿಸಲು ಸಾಧ್ಯವಿಲ್ಲ
ತಮ್ಮ ತಮ್ಮ ಕಾಯಕವ ಮಾಡಿ ಆರಾಧನೆ
ಶ್ರದ್ಧೆ ಪ್ರಯತ್ನದ ಫಲವೇ ಸಾಧನೆ
