ಫ್ಯಾಂಟಸಿ
ಫ್ಯಾಂಟಸಿ
ದೇವರ ಸೃಷ್ಟಿಯ ಫ್ಯಾಂಟಸಿ ಮುಂದೆ
ಮನುಷ್ಯನ ಕಲ್ಪನೆ ಬಹು ಅಲ್ಪ
ಪ್ರಕೃತಿಯ ಸೋಜಿಗದೆಡೆಯಲಿ ನಮಗೆ
ಅರಿವಿಗೆ ಬರುವುದು ಬಹು ಕಷ್ಟ॥
ಕಲ್ಪನೆಯಶಕ್ತಿ ಮನದಲಿದ್ದರೆ
ಸಾಧನೆಯ ಶಿಖರವನೇರಬಹುದು
ಅನಾಹುತವ ತಡೆದು
ಒಳಿತಿನ ದಾರಿಯಲಿ ಸಾಗಬಹುದು ॥
ಫ್ಯಾಂಟಸಿ ಲೋಕವದು
ಮಕ್ಕಳಿಗೆ ವಿಹಾರಧಾಮ
ಬಡವರಿಗೆ ಕನಸಿನ ಲೋಕ
ಸಿರಿವಂತರ ಐಸಿರಿಯಸಾಕಾರ
