STORYMIRROR

Ravindra Ramesh

Abstract Inspirational

4  

Ravindra Ramesh

Abstract Inspirational

ಒಳಗೋ? ಹೊರಗೋ?

ಒಳಗೋ? ಹೊರಗೋ?

1 min
7

ಸಿಲುಕಿದೆ ಈ ಲೋಕದ ಸುಳಿಯೊಳು,

ಅಂಟಿಕೊಂಡದೆಲ್ಲ ಭಾಂದವ್ಯವೆ, ಸಿಗುವುದೆಲ್ಲವು ಆನಂದವೇ

ಎಂಬ ಹಂಬಲದಲ್ಲಿ. 


ದಾರಿ ತಪ್ಪಿಸುತ್ತಿವೆ ನಿನ್ನ ಆನಂದದ ಹಂಬಲವು ಎಂದು ಅತ್ತ ಮತಿಯು,

ಹಂಬಲದ ಭಾಂದವ್ಯವೇ ಭಾವವೆಂದು ಪಿಸುಗುಡುತ್ತಿದೆ ಇತ್ತ ಮನವು. 


ಭಾಂದವ್ಯವೋ ಇಲ್ಲ ಭ್ರಮೆಯೋ, ಆನಂದವೋ ಇಲ್ಲ ಭ್ರಮೆಯೋ,

ತಿಳಿಯದೆನ್ನ ಅಂತರರಂಗದೊಳ್ಳು ಕುಳಿತ ಅಸ್ತಿತ್ವಕ್ಕೆ. 


ಗೊಂದಲದೊಳು ಮತಿಯು,  ಅಸ್ತಿರದೊಳು ಮನವು,

ಅತ್ತ ನೋಡಿದೆ ಇತ್ತ್ರ ನೋಡಿದೆ,

ಅಲ್ಲಿ ಹುಡುಕಿದೆ, ಇಲ್ಲಿಯೂ ಹುಡುಕಿದೆ


ಒಮ್ಮೆ ನನ್ನ ಅಂತರಂಗದೋಳೊಕ್ಕಿ ಹುಡುಕಲೇ 

ಭಾಂದವ್ಯವ, ಆನಂದವಾ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract